

ಬೀದರ್: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ಬಿಜೆಪಿ ನಗರ ಮಂಡಲ ಯುವ ಮೋರ್ಚಾದಿಂದ ನಗರದಲ್ಲಿ ಮಂಗಳವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಜರುಗಿದವು.
ಶ್ರೀ ಪಾಪನಾಶ ಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಗೋಪೂಜೆ ಮಾಡಲಾಯಿತು. ಮಂದಿರ ಪರಿಸರದಲ್ಲಿ 74 ಸಸಿ ನೆಡಲಾಯಿತು. ವಿವಿಧೆಡೆ ಕಾರ್ಯಕರ್ತರು ಸಂಚರಿಸಿ ಹಣ್ಣು ವಿತರಣೆ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ರಾಷ್ಟ್ರೀಯ ಉಪಾಧ್ಯಕ್ಷ, ಕರ್ನಾಟಕ ಸಹ ಪ್ರಭಾರಿ ಪಿ.ಸುಧಾಕರರೆಡ್ಡಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಪೀರಪ್ಪ ಔರಾದೆ, ಮಹಾದೇವ ಹಸೂರೆ, ಸಂತೋಷರಡ್ಡಿ, ವೀರೇಶ ಸ್ವಾಮಿ, ಸಂದೀಪ ಪಾಟೀಲ್, ಪುಷ್ಪಕಕುಮಾರ ಜಾಧವ್, ಬಸವ ಮೂಲಗೆ, ಗಣೇಶ ಭೋಸ್ಲೆ, ನಿತೀನ್ ನವಲಕೆಲೆ, ದೀಪಕ ಠಾಕೂರ್, ಸುಂದ್ರ ಕುಲಕರ್ಣಿ, ಉಪ್ಪಾರ ಕೃಷ್ಣ, ಆಕಾಶ ಸಜ್ಜನಶೆಟ್ಟಿ, ಸಾಯಿನಾಥ ಮಂಗಲಗಿ, ಸಚಿನ್ ಸ್ವಾಮಿ, ರೋಹಿತ ಮಂಗಲಗಿ, ಮುಕೇಶ ಜಾಧವ್ ಇತರರಿದ್ದರು.