ನೌಕರರ ಮತದಾರ ಕರಡು ಪಟ್ಟಿ ಪ್ರಕಟಿಸಿ

prabhuling tugon
Published on

ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಘೋಷಣೆಯಾದರೂ ಜಿಲ್ಲಾ ಘಟಕ ಈವರೆಗೆ ಮತದಾರರ ಪಟ್ಟಿ ಪ್ರಕಟಿಸಿಲ್ಲ. ಕೂಡಲೇ ಪಟ್ಟಿ ಪ್ರಕಟಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ ಆಗ್ರಹಿಸಿದ್ದಾರೆ.
ಸಂಘದ ಬೈಲಾ ಪ್ರಕಾರ ಮತದಾರರ ಕರಡು ಪಟ್ಟಿ ಜು.1ರಂದು ಪ್ರಕಟಿಸೊ ಆಕ್ಷೇಪಣೆ ಸಲ್ಲಿಸಲು ಜು.10ರವರೆಗೆ ಅವಕಾಶ ನೀಡಬೇಕಾಗಿತ್ತು. ಈ ಸಂಬಂಧ ಕೇಂದ್ರ ಸಂಘದಿಂದ ಎಲ್ಲ ಜಿಲ್ಲಾ ಶಾಖೆಗಳಿಗೆ ಸೂಚನೆ ಕೊಡಲಾಗಿದೆ. ಹೀಗಿದ್ದರೂ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ತಾಲೂಕು ಶಾಖೆ ಚುನಾವಣೆ ಅ.9ರಿಂದ 28 ಹಾಗೂ ಜಿಲ್ಲಾ ಕಾರ್ಯಕಾರಿ ನಿರ್ದೇಶಕ ಸ್ಥಾನಗಳಿಗೆ ಅ.28ರಿಂದ ನ.16ರೊಳಗೆ ಚುನಾವಣೆ ನಡೆಸುವಂತೆ ತಿಳಿಸಲಾಗಿದೆ. ಆದರೆ ಮತದಾರರ ಪಟ್ಟಿ ಪ್ರಕಟಿಸಲು ಗಂದಗೆ ವಿಳಂಬ ಮಾಡುತ್ತಿರುವುದು ಅನುಮಾನ ಮೂಡಿಸುತ್ತಿದೆ. ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಅಧಿಕಾರಿಗಳ ಹೆಸರು ಮತಪಟ್ಟಿಯಲ್ಲಿ ಸೇರಿಸಬೇಕು. ಮತದಾನ ಹಕ್ಕಿನಿಂದ ಯಾವೊಬ್ಬ ನೌಕರ ವಂಚಿತರಾಗಬಾರದು. ನೌಕರರ ಹೆಸರು ಕೈಬಿಟ್ಟರೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net