

ಬೀದರ್: ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನಿಮಿತ್ತ ಇಂಜಿನಿಯರ್ ದಿನವನ್ನು ನಗರದಲ್ಲಿ ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕ ಇಂಜಿನಿಯರಿಂಗ್ ಅಸೋಸಿಯೇಷನ್, ಕರ್ನಾಟಕ ಇಂಜಿನಿಯರಿಂಗ್ ಸರ್ವಿಸ್ ಅಸೋಸಿಯೇಷನ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ವತಿಯಿಂದ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವೇಶ್ವರಯ್ಯ ಅವರ ಭಾವಚಿತ್ರ ದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ವೇದಿಕೆ ಸಮಾರಂಭ ಇಂಜಿನಿಯರ್‍ಗಳ ದಿನದ ಮೆರುಗು ಹೆಚ್ಚಿಸಿದವು.
ಅಲಂಕೃತ ರಥದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.
ಗೆಜ್ಜೆ ಕುಣಿತ ಮತ್ತಿತರ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಕಳೆ ತಂದುಕೊಟ್ಟವು. ಎಂಜಿನಿಯರ್‍ಗಳು ಕಲಾ ತಂಡಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಯುವ ಇಂಜಿನಿಯರ್‍ಗಳು ಫಲಕಗಳನ್ನು ಹಿಡಿದು, ತಮ್ಮ ಕಚೇರಿ ಸಿಬ್ಬಂದಿ ಹಾಗೂ ಕಾರ್ಮಿಕರೊಂದಿಗೆ ಭಾಗವಹಿಸಿ ಉತ್ಸಾಹ ಇಮ್ಮಡಿಗೊಳಿಸಿದರು.
ಮೆರವಣಿಗೆ ಮಾರ್ಗದಲ್ಲಿನ ಮಹಾ ಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಮೆರವಣಿಗೆ ಮಾರ್ಗ ಮಧ್ಯೆ ಅಲ್ಲಲ್ಲಿ ಸಾರ್ವಜನಿಕರಿಗೆ ಜಿಲೇಬಿ ವಿತರಿಸಲಾಯಿತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಮೆರವಣಿಗೆಯು ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಗುರುದ್ವಾರ ಗೇಟ್ ಮಾರ್ಗವಾಗಿ ಸಾಗಿ ಲಾವಣ್ಯ ಫಂಕ್ಷನ್ ಹಾಲ್‍ಗೆ ತಲುಪಿ ಸಮಾರೋಪಗೊಂಡಿತು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮುಖಂಡ ಪ್ರಕಾಶ ಟೊಣ್ಣೆ, ಪತ್ರಕರ್ತ ಸದಾನಂದ ಜೋಶಿ, ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ, ಕಾರ್ಯದರ್ಶಿ ಕೃಪಾಸಿಂಧು ಪಾಟೀಲ, ಎಇಇ ರವೀಂದ್ರ ಯರನಾಳೆ, ಅಮೀತ್ ನಾಗೂರೆ, ಅಶೋಕ ಖೇಮಶೆಟ್ಟಿ, ಹಿರಿಯ ಇಂಜಿನಿಯರ್ ಗಳಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಅನಿಲ್ ಖೇಣಿ, ಅನಿಲ್ ಔರಾದೆ, ಅಮರನಾಥ ರಂಜೇರಿ, ಸುಧಾಕರ ಗರ್ಜೆ, ವಸಂತ ಕುಲಕರ್ಣಿ, ಶ್ರೀನಿವಾಸ್ ಸಾಳೆ, ಪ್ರಾಣೇಶ ನಂದಿಕೋಲ, ಮನೋಹರ ದೀಕ್ಷಿತ್, ಮಾಧವ್ ಜೋಶಿ, ಶರಣಬಸವೇಶ್ವರ ವೈ., ಅಂಬಾದಾಸ್ ಉಜ್ಜಯನಿಕರ್, ಅಶೋಕ ಭೋಸ್ಲೆ ಅಶೋಕ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.