

ಕಮಲನಗರ: ತಾಲೂಕಿನ ಹಕ್ಯಾಳ ಗ್ರಾಮದ ಜೈ ಹನುಮಾನ ಮಂದಿರದ ಕಳಸಾರೋಹಣ ಕಾರ್ಯಕ್ರಮ ಸೋಮವಾರ (ಸೆ.17) ನಡೆಯಲಿದೆ.
ಡೋಣಗಾಂವನ ಶ್ರೀ ಹಾವಗಿಸ್ವಾಮಿ ಮಠ ಸಂಸ್ಥಾನದ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಹಾಗೂ ತಮಲೂರಿನ ಶ್ರೀ ಶಿವಾನಂದ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಬೆಳಗ್ಗೆಯಿಂದ ಸಂಜೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗಿನ ಜಾವ 4ಕ್ಕೆ ಹೋಮ, ಯಜ್ಞ ನಡೆಯಲಿದೆ. ಮಹಿಳೆಯರಿಂದ ಕುಂಭ ಕಳಸ ಮೆರವಣಿಗೆ, ವಿಶೇಷ ಪೂಜೆ ಹಾಗೂ ಕಳಸಾರೋಹಣ ಜರುಗಲಿದೆ. ನಂತರ ಮಹಾಪ್ರಸಾದ ವಿತರಣೆ ಬೆಳಗ್ಗೆಯಿಂದ ರಾತ್ರಿ ವರೆಗೆ ಇದೆ.
ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಸಮಾರಂಭ ಆಯೋಜನೆಗೆ ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ರಾತ್ರಿ 8ಕ್ಕೆ ರಂಡ್ಯಾಳ, ಮುರ್ಕಿ, ಮದನೂರ, ಖತಗಾಂವ ಗ್ರಾಮದವರಿಂದ ಭಜನೆ ಕಾರ್ಯಕ್ರಮ ರಾತ್ರಿ ಇಡೀ ಆಯೋಜಿಸಲಾಗಿದೆ. ಈ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕಮಿಟಿ ಪ್ರಮುಖರು ಕೋರಿದ್ದಾರೆ.