ಕಮಠಾಣ ಕಾಲೇಜು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ

Kamthan Pu College
Published on

ಬೀದರ್: ತಾಲ್ಲೂಕಿನ ಕಮಠಾಣ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಬೀದರ್ ನಗರದಲ್ಲಿ ಇತ್ತೀಚೆಗೆ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಜಿಲ್ಲಾಮಟ್ಟದ 100 ಮೀ. ಓಟದ ಸ್ಪರ್ಧೆಯಲ್ಲಿ ಸರಸ್ವತಿ (ಪ್ರಥಮ) ಅರ್ಚನಾ (ದ್ವಿತೀಯ), 200 ಮೀ. ಓಟದ ಸ್ಪರ್ಧೆಯಲ್ಲಿ ಸರಸ್ವತಿ (ಪ್ರಥಮ), ಉದ್ದ ಜಿಗಿತ, ಎತ್ತರ ಜಿಗಿತದಲ್ಲಿ ಅರ್ಚನಾ (ಪ್ರಥಮ) ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ.
ಕೊಕ್ಕೊದಲ್ಲಿ ಸರಸ್ವತಿ, ಅರ್ಚನಾ, ಕವಿತಾ ಹಾಗೂ ಭಾಗ್ಯಶ್ರೀ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲ್ ಮಲಗೆ ತಿಳಿಸಿದ್ದಾರೆ.
ಸನ್ಮಾನ: ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರಾಚಾರ್ಯೆ ಪ್ರತಿಭಾ ಡಿ, ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲ್ ಮಲಗೆ, ಉಪನ್ಯಾಸಕರಾದ ಪ್ರಕಾಶ ಕಾಂಚೋಳೆ, ಸುನೀಲ್ ವೈಜಪುರೆ, ರಮೇಶ ವೈದ್ಯ, ವಿದ್ಯಾವತಿ ಹಿರೇಮಠ, ಶಶಿಕಲಾ ಹಮಿಲಾಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net