ಸಂಸದರ ಪ್ರಯತ್ನ: 15 ಸಾವಿರ ಮನೆ ಮಂಜೂರು

Somnath Mudhool
Published on

ಬೀದರ್: ಸಂಸದ ಸಾಗರ್ ಖಂಡ್ರೆ ಅವರ ವಿಶೇಷ ಪ್ರಯತ್ನದಿಂದಾಗಿ 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ ಜಿಲ್ಲೆಗೆ 15,035 ಮನೆಗಳು ಮಂಜೂರಾಗಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಸಂತಸ ವ್ಯಕ್ತಪಡಿಸಿದ್ದಾರೆ.
ಔರಾದ್ ತಾಲ್ಲೂಕಿಗೆ 2,286, ಬಸವಕಲ್ಯಾಣ ತಾಲ್ಲೂಕಿಗೆ 2,284, ಭಾಲ್ಕಿ ತಾಲ್ಲೂಕಿಗೆ 3,038, ಬೀದರ್ ತಾಲ್ಲೂಕಿಗೆ 2,399, ಚಿಟಗುಪ್ಪ ತಾಲ್ಲೂಕಿಗೆ 1,069, ಹುಲಸೂರು ತಾಲ್ಲೂಕಿಗೆ 471, ಹುಮನಾಬಾದ್ ತಾಲ್ಲೂಕಿಗೆ 1,851 ಹಾಗೂ ಕಮಲ ನಗರ ತಾಲ್ಲೂಕಿಗೆ 1,637 ಮನೆಗಳು ಮಂಜೂರಾಗಿವೆ ಎಂದು ತಿಳಿಸಿದ್ದಾರೆ.
ಸಂಸದರ ಬಡವರ ಪರ ಕಾಳಜಿಯ ಕಾರಣ ಜಿಲ್ಲೆಯ ಗ್ರಾಮೀಣ ಪ್ರದೇಶದ ಕಡು ಬಡವರ, ವಸತಿ ರಹಿತರ ಸೂರಿನ ಕನಸು ನನಸಾಗಲಿದ್ದು, ಸಂಸದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net