

ಬೀದರ್: ತಾಲ್ಲೂಕಿನ ಶೇಕಾಪೂರ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶನಿವಾರ ಅವಿರೋಧವಾಗಿ ನಡೆಯಿತು.
ಅಧ್ಯಕ್ಷರಾಗಿ ಸುಮಿತ್ರಾಬಾಯಿ ಬಸವರಾಜ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಕಮಲಾಬಾಯಿ ಪಾಂಡಪ್ಪ ಬಸಗೊಂಡ ಆಯ್ಕೆಯಾದರು. ಸುಜ್ಞಾನಿ ಚುನಾವಣಾಧಿಕಾರಿಯಾಗಿದ್ದರು.
ಸಂಘದ ಸದಸ್ಯರಾದ ಈರಮ್ಮ ಪಾಂಡಪ್ಪ ಮಡಿವಾಳ, ಶಶಿಕಲಾ ಪಂಡಿತ ಜೋಶಿ, ಲಕ್ಷ್ಮೀಬಾಯಿ ಕಾಶಿನಾಥ, ಸಕ್ಕುಬಾಯಿ ರಮೇಶ, ಕಾರ್ಯದರ್ಶಿ ಸಂತೋಷ ಮೇತ್ರಿ, ಮನ್ನಳ್ಳಿ ಠಾಣೆ ಎಎಸ್‍ಐ ರಾಘವೇಂದ್ರ, ರಾಜಕುಮಾರ ಜಾಧವ್ ಮತ್ತಿತರರು ಇದ್ದರು.