ಮನ್ನಳ್ಳಿ ಬಸ್ ಸಮಯ ಬದಲಿಸಿ

bus memo
Published on

ಬೀದರ್: ತಾಲೂಕಿನ ಮನ್ನಳ್ಳಿಯಿಂದ ಬೀದರ್ ಗೆ ಸಂಜೆ ವೇಳೆ ಹೊರಡುವ ಬಸ್ ಸಮಯ ಬದಲಿಸಬೇಕು ಎಂದು ಅಹಿಂದ ಚಿಂತಕರ ವೇದಿಕೆ ಒತ್ತಾಯಿಸಿದೆ.
ವೇದಿಕೆ ಪ್ರಮುಖರು ನಗರದಲ್ಲಿ ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಅವರಿಗೆ ಮನವಿಪತ್ರ ಸಲ್ಲಿಸಿ, ಸದ್ಯ ಪ್ರತಿ ದಿನ ಸಂಜೆ 6.30ರಿಂದ 7 ವರೆಗೆ ಎರಡು ಬಸ್ಗಳು ಸಂಚರಿಸುತ್ತವೆ.
ಗ್ರಾಮದ ಬಾಲಕರ ಹಾಗೂ ಮುರಾರ್ಜಿ ದೇಸಾಯಿ ವಸತಿ ನಿಲಯಗಳ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪ್ರಯಾಣಿಕರ ಅನುಕೂಲಕ್ಕಾಗಿ ಎರಡರಲ್ಲಿ ಒಂದು ಬಸ್‌ ನ ಸಮಯ ಬದಲಿಸಬೇಕು. ಮನ್ನಳ್ಳಿಯಿಂದ ರಾತ್ರಿ 8ಕ್ಕೆ ಬಸ್ ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವೇದಿಕೆಯ ಹೈದರಾಬಾದ್ ಕರ್ನಾಟಕ ಅಧ್ಯಕ್ಷ ದಿಲೀಪಕುಮಾರ ವರ್ಮಾ, ಜಿಲ್ಲಾ ಗೌರವಾಧ್ಯಕ್ಷ ಘಾಳೆಪ್ಪ ಅಂತಿ, ಅಧ್ಯಕ್ಷ ಧನರಾಜ ಬೇಮಳಖೇಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net