15 ಕ್ವಿಂಟಲ್ ಅನ್ನ ಪ್ರಸಾದ ವಿತರಣೆ

Visghneswar Seva Samiti-1
Published on

ಬೀದರ್: ಗಣೇಶ ವಿಸರ್ಜನೆ ನಿಮಿತ್ತ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಭಕ್ತರಿಗೆ 15 ಕ್ವಿಂಟಲ್‍ಗೂ ಹೆಚ್ಚು ಅನ್ನ ಪ್ರಸಾದ ವಿತರಿಸಲಾಯಿತು.
ಸಮಿತಿಯ ಸದಸ್ಯರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಬಳಿ ಭಕ್ತರಿಗೆ ವೆಜ್ ಪುಲಾವ್, ಟೊಮೆಟೊ ರೈಸ್, ಮಸಾಲಾ ರೈಸ್, ಜಿರಾ ರೈಸ್, ಮೊಸರನ್ನ, ಪುಳಿಯೊಗರೆ ಹಾಗೂ ಕಡಲೆ ಉಸಳಿ ವಿತರಿಸಿ ವಿಘ್ನ ನಿವಾರಕನಿಗೆ ಭಕ್ತಿ ಸಮರ್ಪಿಸಿದರು.
2017 ರಿಂದ ಗಣೇಶ ವಿಸರ್ಜನೆ ವೇಳೆ ಅನ್ನ ದಾಸೋಹ ಮಾಡುತ್ತ ಬರಲಾಗುತ್ತಿದೆ. ಸಾವಿರಾರು ಭಕ್ತರು ಪ್ರೀತಿಯಿಂದ ದಾಸೋಹ ಸ್ವೀಕರಿಸಿದ್ದಾರೆ ಎಂದು ಸಮಿತಿಯ ಕೆ. ಸತ್ಯಮೂರ್ತಿ ಹಾಗೂ ಜಗನ್ನಾಥ ಪೊಬ್ಬಾ ತಿಳಿಸಿದರು.
ಸಮಿತಿ ಶಂಕರರಾವ್ ಕೊಟರಗಿ, ರಾಜಶೇಖರ ಮೋದಿ, ಜಾನಕಿನಾಥ ಮಾಮಡಗಿ, ಚಂದ್ರಕಾಂತ ದೇವತರಾಜ, ಕೆ.ಎನ್. ಪುಟ್ಟರಾಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net