ಗ್ರಾಪಂ ಉಪಾಧ್ಯಕ್ಷರಿಂದ ಸಚಿವರಿಗೆ ಕುರಿ ಉಡುಗೊರೆ

Narasappa B. Janaknoor Sanman To Eshwar Khandre
Published on

ಬೀದರ್: ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಬಿ. ಜಾನಕನೋರ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಕುರಿ ಉಡುಗೊರೆಯಾಗಿ ನೀಡಿದರು.
ಯಾಕತಪುರಕ್ಕೆ ಸೋಮವಾರ ಭೇಟಿ ನೀಡಿದ್ದ ಸಚಿವರಿಗೆ ಪೇಟ ತೊಡಿಸಿ, ಕಂಬಳಿ ಹೊದಿಸಿ, ಸನ್ಮಾನಿಸಿ, ಕುರಿ ಉಡುಗೊರೆಯಾಗಿ ಕೊಟ್ಟರು.
ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮನ್ನಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಹೀಗಾಗಿ ತಮಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಗೋವರ್ಧನ್ ರಾಠೋಡ್, ಪ್ರಭು ಬುಗಟೆ, ಉಮೇಶ ರಾಯಗೊಂಡ, ವಿಠ್ಠಲ ಭಂಗೂರೆ, ರಾಜು ಕೋಲಿ, ನವೀನ್, ಜಗದೀಶ್, ಈಶ್ವರ ಬಕ್ಕನೋರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net