ವಿಶ್ವಕರ್ಮ ಜಯಂತಿ ಅದ್ದೂರಿ ಆಚರಣೆ 17ಕ್ಕೆ

filter: 0; jpegRotation: 180; fileterIntensity: 0.000000; filterMask: 0;
filter: 0; jpegRotation: 180; fileterIntensity: 0.000000; filterMask: 0;
Published on

ಬೀದರ್: ವಿಶ್ವಕರ್ಮ ಜಯಂತಿ ಅದ್ದೂರಿ ಜತೆಗೆ ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಹಸೀಲ್ದಾರ್ ದಿಲ್ಶಾದ್ ಮಹತ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆ.17ರಂದು ಬೆಳಗ್ಗೆ 11.30ಕ್ಕೆ ಡಿಸಿ ಕಚೇರಿಯಿಂದ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 2ಕ್ಕೆ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಂತೆ ಸರ್ಕಾರದ ಆದೇಶವಿದ್ದು, ಪಾಲನೆ ಮಾಡಬೇಕು. ಸಮಾಜದ ಎಲ್ಲರೂ ಒಗ್ಗೂಡಿ ಮಾಡಿದಾಗಲೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಯಂತಿಯನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ನಿವೃತ್ತ ಕೃಷಿ ಅಧಿಕಾರಿ ಭೀಮಸೇನ ಪಾಂಚಾಳ ವಿಶೇಷ ಉಪನ್ಯಾಸ ನೀಡುವರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ವಾತರ್ಾಧಿಕಾರಿ ಡಾ.ಸುರೇಶ ಜಿ., ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಪಾಂಚಾಳ, ಪ್ರಮುಖರಾದ ವಿರೂಪಾಕ್ಷ ಗಾದಗಿ, ಪಾಂಡುರಂಗ ಪಾಂಚಾಳ, ಶಿವಾನಂದ, ಸಿದ್ಧಾರೂಢ ವಿಶ್ವಕರ್ಮ, ವಿಜಯಕುಮಾರ ಪಾಂಚಾಳ, ಬಾಬುರಾವ ವಿಶ್ವಕರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net