ಶಿಥಿಲಾವಸ್ಥೆಯಲ್ಲಿ ಮೈಲೂರು ಶಾಲೆ ಕಟ್ಟಡ

Pressmeet
Published on

ಬೀದರ್: ಶಿಥಿಲಾವಸ್ಥೆಗೆ ತಲುಪಿರುವ ಮೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಹೇಶ ಗೋರನಾಳಕರ್ ಆಗ್ರಹಿಸಿದರು.
ಇತ್ತೀಚೆಗೆ ಭೇಟಿ ನೀಡಿದ ಶಾಸಕರಾದ ಪೌರಾಡಳಿತ ಸಚಿವ ರಹೀಮ್ ಖಾನ್ ನೂತನ ಕಟ್ಟಡ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಕ್ಷಣ ಶಾಲೆ ನೆಲಸಮಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಚ್ಚಾಗಿ ಬಡ ಕಾರ್ಮಿಕ ಕುಟುಂಬದ ಮಕ್ಕಳು ಅಭ್ಯಸಿಸುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಜಿಪಂ ಸಿಇಒ, ಡಿಡಿಪಿಐ ಭೇಟಿ ನೀಡಿ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಬೇಕು. ಎರಡು ದಶಕದಿಂದ ತರಗತಿ ಸಮಯ ಬೆಳಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ ಇತ್ತು. ಖಾಸಗಿ ಕೆಲಸಕ್ಕಾಗಿ ಮುಖ್ಯಗುರು, ಶಿಕ್ಷಕರು ಈ ರೀತಿ ಸಮಯ ನಿಗದಿಪಡಿಸಿದ್ದರು. ನಾನು ಎಸ್ಡಿಎಂಸಿ ಅಧ್ಯಕ್ಷನಾದ ಬಳಿಕ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಿಗದಿಗೊಳಿಸಿದೆ. ಇದರಿಂದ ಸಿಡಿದೆದ್ದ ಮುಖ್ಯಗುರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ಪ್ರವೇಶ ರದ್ದುಪಡಿಸಿದ್ದು, ಸೆ.17ರಂದು ಕಲಬುರಗಿಗೆ ಆಗಮಿಸಲಿರುವ ಸಿಎಂ, ಶಿಕ್ಷಣ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.
ಸಂಗಮೇಶ ಏಣಕೂರ, ಸಂತೋಷ ಏಣಕೂರ, ಪ್ರಕಾಶ ರಾವಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net