

ಬೀದರ್: ಕಾರಂಜಾ ಮಾದರಿಯಲ್ಲಿ ಔರಾದ್ ತಾಲೂಕಿನಲ್ಲಿ ಜಲಾಶಯ ನಿರ್ಮಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಯ್ಯ ಎಸ್.ಸ್ವಾಮಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಕೃಷಿಕ ಸಮಾಜದ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಮಾತನಾಡಿ, ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಔರಾದ್ ನಲ್ಲಿ ನೀರಾವರಿ ಸೌಲಭ್ಯವಿಲ್ಲ. ಹೀಗಾಗಿ ದೊಡ್ಡ ಜಲಾಶಯ ನಿರ್ಮಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು. ಜಲಾಶಯ ನಿರ್ಮಾಣ ಸಂಬಂಧ ಸಮಿತಿ ಸದಸ್ಯರ ನಿಯೋಗ ಪ್ರಧಾನಿ, ಸಿಎಂ ಹಾಗೂ ಸಂಬಂದಧಿಸಿದ ನೀರಾವರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸೋಣ. ಜಿಲ್ಲೆಯಲ್ಲಿ ಒಂದು ವಾರ ಸತತ ಮಳೆಯಾಗಿದ್ದರಿಂದ ಬೆಳೆಗಳು ಹಾನಿಯಾಗಿದ್ದು, ಸಕರ್ಾರ ತಕ್ಷಣ ಪರಿಹಾರ ನೀಡಬೇಕು. ಉಳಿದ ಬೆಳೆಗಳ ರಕ್ಷಣೆಗಾಗಿ ತಾಡಪತ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಬೇಕು ಎಂದು ಕೋರಿದರು. ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ಕೃಷಿಕ ಸಮಾಜ ರಾಜ್ಯ ಪ್ರತಿನಿ ವಿಶ್ವನಾಥ ಪಾಟೀಲ್ ಮಾಡಗೂಳ, ಜಿಲ್ಲಾ ಉಪಾಧ್ಯಕ್ಷ ಬಾಬುರಡ್ಡಿ, ಖಜಾಂಚಿ ರಮೇಶ ಪಾಟೀಲ್, ಸದಸ್ಯರಾದ ಸಂತೋಷ ಹಜಾರಿ, ದಯಾನಂದ ಸ್ವಾಮಿ, ವಿಶ್ವಾಂಬರ ಚಿಕ್ಲೆ, ಇಸ್ಮಾಯಿಲ್ ಪಟೇಲ್ ಇತರರಿದ್ದರು.