ಡಿಎಂಇಎಸ್ ಕ್ಲಬ್ ಉದ್ಘಾಟನೆ

Dattagiri School
Published on

ಬೀದರ್: ನಗರದ ಶ್ರೀ ದತ್ತಗಿರಿ ಮಹಾರಾಜ ಪ್ರಾಥಮಿಕ ಮತ್ತು ಪ್ರೌಢಶಾಲೆ (ಕನ್ನಡ ಮಾಧ್ಯಮ)ಯಲ್ಲಿ ಡಿಎಂಇಎಸ್ ಸ್ಪೋಕನ್ ಇಂಗ್ಲಿಷ್ ಕ್ಲಬ್ ಆರಂಭವಾಗಿದೆ.
ಪೂಜ್ಯ ಅವಧೂತಗಿರಿ ಮಹಾರಾಜ ಉದ್ಘಾಟಿಸಿ ಮಾತನಾಡಿ, ಮಕ್ಕಳ ಉನ್ನತ ಶಿಕ್ಷಣಕ್ಕೆ ಆಂಗ್ಲ ಭಾಷೆ ಸರಳ ಗೊಳಿಸುವ ಉದ್ದೇಶದಿಂದ ಶಾಲೆಯಲ್ಲಿ ಕ್ಲಬ್ ಸ್ಥಾಪಿಸಿದ್ದು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಉಪಾಧ್ಯಕ್ಷ ರಮೇಶ ದುಕಾನದಾರ್, ಕಾರ್ಯದರ್ಶಿ ಶಿವರಾಜ ಪಾಟೀಲ್, ಕೋಶಾಧ್ಯಕ್ಷ ಪ್ರಭಾಕರ ಮೈಲಾಪುರೆ, ಪ್ರಾಚಾಯರ್ೆ ಜಯದೇವಿ ಯದಲಾಪುರೆ ಇತರರಿದ್ದರು. ಕೃಪಾ ಸ್ವಾಗತಿಸಿದರು. ಬಸವಶ್ರೀ ನಿರೂಪಣೆ ಮಾಡಿದರು. ವೈಷ್ಣವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net