

ಔರಾದ್: ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸರುಬಾಯಿ ವೈಜಿನಾಥ ಘುಳೆ ಹಾಗೂ ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಅವಿರೋಧ ಆಯ್ಕೆಯಾದರು.
ಎರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮಲಶೆಟ್ಟಿ ಚಿದ್ರೆ ಘೋಷಣೆ ಮಾಡಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ್, ಹೊಸದಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಸದಸ್ಯರ ಸಹಕಾರದೊಂದಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ಸ್ವಚ್ಛತೆ, ಬೀದಿ ದೀಪಗಳನ್ನು ಅಳವಡಿಸುವುದು ಒಳಗೊಂಡು ಪಟ್ಟಣಕ್ಕೆ ಬೇಕಿರುವ ಎಲ್ಲ ಸೌಕರ್ಯ ಒದಗಿಸಬೇಕು. ಎಲ್ಲ ಕೆಲಸಗಳಿಗೆ ನನ್ನ ಸಹಕಾರ ಸದಾ ಇರುತ್ತದೆ. ಪಟ್ಟಣವನ್ನು ಮಾದರಿಯನ್ನಾಗಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿಸಲು ಶ್ರಮಿಸುತ್ತಿದ್ದೇನೆ. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿದೆ. ಬರುವ ದಿನಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾರಂಜಾ ಜಲಾಶಯದಿಂದ ಔರಾದ್ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಕೆಲಸ ಆರಂಭವಾಗಲಿದೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪಟ್ಟಣದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯಾವುದೇ ರೀತಿಯ ದೂರು ಬಾರದಂತೆ ಕೆಲಸ ಮಾಡಬೇಕು ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ ಪಾಟೀಲ್, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಂಬಿಕಾ ಕೇರಬಾ ಪವಾರ್, ಸಂತೋಷ ಪೋಕಲವಾರ್, ಧೊಂಡಿಬಾ ನರೋಟೆ, ಶಿವಾಜಿ ಲಕ್ಷ್ಮಣ, ಸಂಜುಕುಮಾರ ವಡೆಯಾರ್, ಅಬ್ಜಲ್ ಪಠಾಣ್, ಶೀಲಾಬಾಯಿ ರಾಮಚಂದ್ರ, ಸಂಗೀತಾ ಯಾದವರಾವ, ಪ್ರೇರಣಾ ಬಾಬು, ಬನಸಿಲಾಲ್ ಖಿರಾನಾಯ್ಕ, ದಯಾನಂದ ಘೂಳೆ, ಸುರೇಖಾ ಸುರ್ಯಕಾಂತ, ಗುಂಡಪ್ಪ ಮುದಾಳೆ, ಪ್ರಮುಖರಾದ ಮಹೇಶ್ವರ ಸ್ವಾಮಿ, ಖಂಡೋಬಾ ಕಂಗಟೆ, ಶಿವರಾಜ ಅಲ್ಮಾಜೆ, ರಮೇಶ ಉಪಾಸೆ, ಸಚಿನ ರಾಠೋಡ್, ಖಾಜಾಯಿಯ್ಯಾ, ಸಚಿನ್ ಬಿರಾದಾರ್, ರವೀಂದ್ರರಡ್ಡಿ, ಪ್ರಕಾಶ ಜೀರ್ಗೆ, ರಾಜೇಂದ್ರ ಮಾಳಿ, ಬಸವರಾಜ ಹಳ್ಳೆ, ಗೋವಿಂದರಡ್ಡಿ, ಪ್ರದೀಪ ಪವಾರ್, ಸುಜಿತ್ ರಾಠೋಡ್, ಉದಯ ಸೋಲಾಪುರೆ ಇತರರಿದ್ದರು.