ಯುವತಿ ಕುಟುಂಬಕ್ಕೆ ನೆರವು

mule
Published on

ಬಸವಕಲ್ಯಾಣ: ಈಚೆಗೆ ಕೊಲೆಯಾದ ಗುಣತೀರ್ಥವಾಡಿಯ ಯುವತಿ ಮನೆಗೆ ಭಾನುವಾರ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಭೇಡಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಯುವತಿ ಭೀಕರ ಕೊಲೆ ಮಾನವ ಸಮಾಜ ತಲೆತಗ್ಗಿಸುವಂಥ ಅಮಾನವೀಯ ಘಟನೆ. ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಬಡ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ, ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಪ್ರಮುಖರಾದ ದತ್ತು ಪದ್ಮೆ, ಮಲ್ಲಿಕಾರ್ಜುನ ಬೊಕ್ಕೆ, ಗೋವಿಂದ ಚಾಮಾಲೆ, ರಾಮಣ್ಣ ಮಂಠಾಳೆ, ರಾಜಕುಮಾರ ಹಿರಲೆ, ಸಂಭಾಜಿ ಜಗತಾಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net