ನೀರಿನ ಗುಂಡಿಗೆ ಬಿದ್ದು ಬಾಲಕ ಸಾವು

jishan
Published on

ಔರಾದ್: ಆಟವಾಡಲು ಹೋಗಿ ನೀರಿನ ಗುಂಡಿಗೆ ಬಿದ್ದು ಪಟ್ಟಣದ ಸಂತೋಷ ಬಡಾವಣೆ ನಿವಾಸಿ ಎಂ.ಡಿ. ಜೀಶಾನ್ ಇಸ್ಮಾಯಿಲ್ (11) ಮೃತಪಟ್ಟಿದ್ದಾನೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಅಗೆದಿದ್ದ ಗುಂಡಿಯಲ್ಲಿ ಬಾಲಕ ಬಿದ್ದು ಕೊನೆಯುಸಿರೆಳೆದಿದ್ದಾನೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ನಾಮಫಲಕ ಹಾಕಿಲ್ಲ. ನನ್ನ ಮಗನ ಸಾವಿಗೆ ಕಾರಣರಾದ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ನೀಡಿದ ದೂರಿನನ್ವಯ ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net