ಆರೋಗ್ಯ ತಪಾಸಣಾ ಶಿಬಿರ

shibir
Published on

ಬೀದರ್: ವಿಶ್ವಕರ್ಮ ಜಯಂತಿ ನಿಮಿತ್ತ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯಿಂದ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿತ್ತು.
ಮೌನೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಶಿಬಿರದಲ್ಲಿ ಆರೋಗ್ಯ ಜತೆಗೆ ರಕ್ತ ತಪಾಸಣೆಯೂ ನಡೆಯಿತು. ಬಡಾವಣೆ ನಿವಾಸಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ ಪಾಂಚಾಳ, ಉಪಾಧ್ಯಕ್ಷ ಪಾಂಡುರಂಗ ವಿಶ್ವಕರ್ಮ, ಖಜಾಂಚಿ ನಾರಾಯಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಪ್ರಮುಖರಾದ ಚಂದ್ರಕಲಾ ವಿಶ್ವಕರ್ಮ, ವೈಜನಾಥ, ಜಗನ್ನಾಥ, ಮಹೇಶ್ವರಿ ಪಾಂಚಾಳ, ರಾಜಕುಮಾರ ಹಳ್ಳದಕೇರಿ, ಸೂರ್ಯಕಾಂತ ವಿಶ್ವಕರ್ಮ, ಸರ್ವೇಶ, ಶ್ರೀದೇವಿ, ಸುಲೋಚನಾ, ಉಮೇಶ, ಶಾಮರಾವ, ಬಾಬುರಾವ ಚಾಂಬೋಳ, ಬಾಬುರಾವ ಚಿಮಕೋಡ, ಸಿದ್ಧಾರೂಢ ವಿಶ್ವಕರ್ಮ, ಶ್ರೀಕಾಂತ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು. ಭಗವಾನ್ ವಿಶ್ವಕರ್ಮ ಜಯಂತಿ ನಿಮಿತ್ತ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷ ತರುಣ್ ನಾಗಮಾರಪಳ್ಳಿ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದು ಸಮಾಜದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net