ಸಮಾನತೆ ಸಮಾಜ ಕಟ್ಟಿದ ಶರಣರು

KHB Hudco Colony Pravachan Programme
Published on

ಬೀದರ್: ಬಸವಾದಿ ಶರಣರು 12ನೇ ಶತಮಾನದಲ್ಲಿ ಸಮಾನತೆಯ ಸಮಾಜ ಕಟ್ಟಿದ್ದರು ಎಂದು ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಹೇಳಿದರು.
ಇಲ್ಲಿಯ ಕೆ.ಎಚ್.ಬಿ. ಹುಡ್ಕೊ ಕಾಲೊನಿಯ ಬಸವ ಮಂಟಪದಲ್ಲಿ ಈಚೆಗೆ ನಡೆದ ಶ್ರಾವಣ ನಿಮಿತ್ತ ಹಮ್ಮಿಕೊಂಡಿದ್ದ ಒಂದು ತಿಂಗಳ ಪ್ರವಚನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದ ಭಾವ ಇರಲಿಲ್ಲ. ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಕಾಯಕ- ದಾಸೋಹದ ಮಹತ್ವವನ್ನು ಶರಣರು ಸಾರಿದ್ದರು ಎಂದು ಹೇಳಿದರು.
ಪ್ರವಚನ ನಡೆಸಿಕೊಟ್ಟ ಶರಣಯ್ಯ ಸ್ವಾಮಿ ಅವರು ಶ್ರೀ ಶರಣಬಸವೇಶ್ವರ ಪವಾಡಗಳನ್ನು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಚಿಂತಕಿ ಸುವರ್ಣಾ ಚಿಮಕೋಡೆ, ಸಾಹಿತಿ ಪುಣ್ಯವತಿ ವಿಸಾಜಿ, ಸೂಗಮ್ಮ ಜಿರೋಬೆ, ಪ್ರಶಾಂತ ದೊಡ್ಡಿ, ಝರೆಪ್ಪ ಮಮದಾಪುರೆ ಅತಿಥಿಯಾಗಿದ್ದರು.
ಕಸ್ತೂರಿ ಸ್ವಾಮಿ, ರಾಜೇಶ್ವರಿ ಶೀಲವಂತ, ವಿಜಯಲಕ್ಷ್ಮಿ ಪಾಟೀಲ, ನಾಗಮ್ಮ ಸಿರ್ಸಿ, ಜಗದೇವಿ ಮಾಶೆಟ್ಟಿ, ಶೋಭಾ ಸೋನಾಳೆ, ಕಲ್ಪನಾ, ನೀಲಾ, ಸುಜಾತಾ ಗುಡಿ, ಗೋದಾವರಿ, ಶರಣಪ್ಪ ಚಿಮಕೋಡೆ, ವಿಠ್ಠಲರಾವ್ ಸಿರ್ಸಿ, ಶಿವರಾಜ ಮಾಶೆಟ್ಟಿ, ರೋಹಿತ್ ಜಿರೋಬೆ, ಪುಟ್ಟು ಸ್ವಾಮಿ, ಪವನ್ ಮಾಶೆಟ್ಟಿ, ಶರಣಪ್ಪ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ಸುನೀತಾ ಜಿರೋಬೆ ನಿರೂಪಿಸಿದರು. ಶೋಭಾ ಜಿರೋಬೆ ಸ್ವಾಗತಿಸಿದರು. ಹೇಮಲತಾ ವೀರಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net