ಬೀದರ್: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 28ನೇ ವಾರ್ಷಿಕ ಮಹಾಸಭೆ ಸೆ. 16 ರಂದು ಮಧ್ಯಾಹ್ನ 12ಕ್ಕೆ ಇಲ್ಲಿಯ ದೇವಿ ಕಾಲೊನಿಯ ದೇವಿ ಮಂದಿರದಲ್ಲಿ ಇರುವ ರೇವಪಯ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ರಮೇಶ ಮಠಪತಿ ಅಧ್ಯಕ್ಷತೆ ವಹಿಸುವರು. ಸಂಘದ ಸದಸ್ಯರು ತಪ್ಪದೇ ಭಾಗವಹಿಸಬೇಕು ಎಂದು ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮೋಳಕೇರಿ ಮನವಿ ಮಾಡಿದ್ದಾರೆ.