ಶಿಕ್ಷಕ ಅಬ್ದುಲ್ ಸಾಹೇಬ್ ಆಲಾಸ್‍ಗೆ ಬೀಳ್ಕೊಡುಗೆ

Teachers Sangh Send off programme Photo-1
Published on

ಬೀದರ್: ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ವರ್ಗವಾಗಿರುವ ರೇಕುಳಗಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಅಬ್ದುಲ್ ಸಾಹೇಬ್ ಆಲಾಸ್ ಅವರನ್ನು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಇಲ್ಲಿಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಬೀಳ್ಕೊಡಲಾಯಿತು.
ಅಬ್ದುಲ್ ಸಾಹೇಬ್ ಆಲಾಸ್ ಅವರು ತಮ್ಮ ಸೇವಾ ನಿಷ್ಠೆಯಿಂದ ಜಿಲ್ಲೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ನುಡಿದರು.
ಆಲಾಸ್ ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಗುಣ ಹೊಂದಿದ್ದಾರೆ. ಸಂಗೀತಗಾರರೂ ಆಗಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿದ್ದಾರೆ. ಅವರೊಬ್ಬರು ಮಾದರಿ ಶಿಕ್ಷಕರಾಗಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನುಡಿದರು.
ಅಕ್ಕ ಮಹಾದೇವಿ ಕಾಲೇಜು ಉಪನ್ಯಾಸಕ ಶಿವಶರಣಪ್ಪ ಹುಗ್ಗೆಪಾಟೀಲ, ಶಿಕ್ಷಕರ ವಿಕಾಸ ಪರಿಷತ್ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಮಾತನಾಡಿದರು.
ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಝಾಕೀರ್ ಹುಸೇನ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸೈಯದ್ ಫುರಖಾನ್, ಸಂಘದ ಬೀದರ್ ತಾಲ್ಲೂಕು ಅಧ್ಯಕ್ಷ ಶಾಬುದ್ದಿನ್, ರಾಜ್ಯ ಪ್ರಶಸ್ತಿ ಪುರಸ್ಕøತರಾದ ದಿಲೀಪಕುಮಾರ ಡೊಂಗರಗೆ, ಧನರಾಜ ಗುಡಮೆ, ರಾಜ್ಯ ಎಸ್‍ಸಿ, ಎಸ್‍ಟಿ ಮಾಧ್ಯಮಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಗಣಪತಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಟಾಳೆ, ರಘುನಾಥ ಭೂರೆ, ಗೋವಿಂದ ಪೂಜಾರಿ, ಶಿವಕುಮಾರ ಸದಾಫುಲೆ, ರವಿಕುಮಾರ ಕುಮನೂರ, ಸಂಜೀವಕುಮಾರ ಕನೇರಿ, ಬಳಿರಾಮ ಕೊರ್ನಾಳೆ, ಶಾಂತಕುಮಾರ, ಪ್ರಲ್ಹಾದ್, ತಾಜುದ್ದಿನ್ ಇದ್ದರು.
ದೇವಿಪ್ರಸಾದ್ ಕಲಾಲ್ ನಿರೂಪಿಸಿದರು. ಬಾಬುರಾವ್ ಮಾಳಗೆ ಸ್ವಾಗತಿಸಿದರು. ಸಂಘದ ಸಂಘದ ಜಿಲ್ಲಾ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಾಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net