

ಬೀದರ್: 2025 ರ ಜನವರಿಯಲ್ಲಿ ಸೇಡಂನಲ್ಲಿ ನಡೆಯಲಿರುವ ಏಳನೇ ಭಾರತೀಯ ಸಂಸ್ಕøತಿ ಉತ್ಸವ ನಿಮಿತ್ತ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹಮ್ಮಿಕೊಂಡಿರುವ ‘ಕಲ್ಯಾಣ ಕರ್ನಾಟಕ ವಿಕಾಸ ಪಥ’ ರಥಯಾತ್ರೆಯು ಸೆ. 7 ರಂದು ಬೀದರ್ ಜಿಲ್ಲೆಗೆ ಬರಲಿದೆ.
ಸಮಾವೇಶದ ಪ್ರಚಾರಾರ್ಥವಾಗಿ ಸ್ವಾಮೀಜಿ ಅವರು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 48 ತಾಲ್ಲೂಕುಗಳಲ್ಲಿ ಐದು ಸಾವಿರ ಕಿ.ಮೀ. ರಥಯಾತ್ರೆ ಹಮ್ಮಿಕೊಂಡಿದ್ದಾರೆ. ಈಗಾಗಲೇ 40 ತಾಲ್ಲೂಕುಗಳಲ್ಲಿ ಯಾತ್ರೆ ಪೂರ್ಣಗೊಳಿಸಿದ್ದು, ಸೆ. 7 ರಿಂದ 10 ರ ವರೆಗೆ ಜಿಲ್ಲೆಯಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಯಾತ್ರೆ ಮಾರ್ಗದಲ್ಲಿ ಸೆ. 7 ರಂದು ಬೆಳಿಗ್ಗೆ 10ಕ್ಕೆ ಹುಮನಾಬಾದ್, ಮಧ್ಯಾಹ್ನ 2.30ಕ್ಕೆ ಬಸವಕಲ್ಯಾಣದಲ್ಲಿ ಸಭೆ ನಡೆಸಿ, ಸಾರ್ವಜನಿಕರನ್ನು ಸಮಾವೇಶಕ್ಕೆ ಆಹ್ವಾನಿಸಲಿದ್ದಾರೆ. ರಾತ್ರಿ ಹಾರಕೂಡದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
8 ರಂದು ಬೆಳಿಗ್ಗೆ 10ಕ್ಕೆ ಹಾರಕೂಡ, ಮಧ್ಯಾಹ್ನ 2ಕ್ಕೆ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶಿವಾನಂದ ಸ್ವಾಮೀಜಿ ಸಾನಿಧ್ಯದಲಿ,್ಲ ಸಂಜೆ 6ಕ್ಕೆ ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಸಭೆ ನಡೆಸಲಿದ್ದಾರೆ. ನಂತರ ಹಿರೇಮಠ ಸಂಸ್ಥಾನದಲ್ಲಿ ತಂಗಲಿದ್ದಾರೆ. ಸೆ. 9 ರಂದು ಬೆಳಿಗ್ಗೆ 10ಕ್ಕೆ ಔರಾದ್‍ನ ಅಮರೇಶ್ವರ ಮಂದಿರದಲ್ಲಿ ಶಾಸಕ ಪ್ರಭು ಚವಾಣ್ ಅಧ್ಯಕ್ಷತೆ, ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಬೀದರ್‍ನ ಸಿದ್ಧಾರ್ಥ ಕಾಲೇಜು ಸಮೀಪ ರಥಕ್ಕೆ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ 6ಕ್ಕೆ ಬೀದರ್‍ನ ಸಿದ್ಧಾರೂಢ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ ಹಾಗೂ ರಾಜಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ಸಭೆ ನಡೆಯಲಿದೆ. ಸೆ. 10 ರಂದು ಬೆಳಿಗ್ಗೆ 10ಕ್ಕೆ ಚಿಟಗುಪ್ಪದಲ್ಲಿ ಸಭೆ ಜರುಗಲಿದೆ. ನಂತರ ರಥ ಯಾತ್ರೆಯು ಚಿಂಚೋಳಿ ತಾಲ್ಲೂಕಿಗೆ ತೆರಳಲಿದೆ ಎಂದು ಹೇಳಿದ್ದಾರೆ.
9 ದಿನಗಳ ಭಾರತೀಯ ಸಂಸ್ಕøತಿ ಉತ್ಸವದಲ್ಲಿ ಮಾತೆ, ದೇಶ, ಧರ್ಮ, ಸಂಸ್ಕøತಿ, ಶಿಕ್ಷಣ, ಸ್ವಯಂ ಉದ್ಯೋಗ, ಯುವ ಶಕ್ತಿ, ಆಹಾರ-ಆರೋಗ್ಯ, ಪರಿಸರ, ಕೃಷಿ, ಗ್ರಾಮ, ಸ್ವದೇಶಿ ಸ್ವಾಭಿಮಾನ ಇತ್ಯಾದಿ ವಿಷಯಾಧಾರಿತ ಸಮಾವೇಶಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.