ಜಾತಿ ಪ್ರಮಾಣ ಪತ್ರ ಕೊಡದಿದ್ದರೆ ಬೊಬ್ಬೆ ಚಳವಳಿ

Santosh Joldapke
Published on

ಬೀದರ್: ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಗೊಂಡ ಹಾಗೂ ಟೋಕರೆ ಕೋಳಿ ಜಾತಿ ಪ್ರಮಾಣ ಪತ್ರ ಕೊಡದಿದ್ದರೆ ಬೊಬ್ಬೆ ಚಳವಳಿ ನಡೆಸಲಾಗುವುದು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಎಚ್ಚರಿಸಿದ್ದಾರೆ.
ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಡುತ್ತಿರುವವರ ಜತೆ ಆಯಾ ತಹಶೀಲ್ದಾರ್ ಕಚೇರಿ ಎದುರು ಬೊಬ್ಬೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಜಾತಿ ಪ್ರಮಾಣ ಪತ್ರಕ್ಕೆ ಇಲ್ಲ ಸಲ್ಲದ ದಾಖಲೆಗಳನ್ನು ಕೇಳಲಾಗುತ್ತಿದೆ. ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಇದರಿಂದ ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರದ ವಿವಿಧ ಸೌಲಭ್ಯಕ್ಕಾಗಿ ಅರ್ಹರು ತೊಂದರೆ ಅನುಭವಿಸಬೇಕಾಗಿದೆ ಎಂದು ದೂರಿದ್ದಾರೆ.
ಕುಟುಂಬದ ಒಬ್ಬರು ಸದಸ್ಯರ ಜಾತಿ ಪ್ರಮಾಣ ಪತ್ರ, ಹಳೆಯ ಜಾತಿ ಪ್ರಮಾಣ ಪತ್ರ, ಪಹಣಿ ಅಥವಾ ಶೈಕ್ಷಣಿಕ ದಾಖಲಾತಿ ಆಧಾರದಲ್ಲಿ ವಾರದೊಳಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net