ಮೂರು ಎಫ್ಎಂ ಚಾನಲ್ ಮಂಜೂರು

Bhagavant Khuba
Published on

ಬೀದರ್: ಇಲ್ಲಿನ ಎಫ್ಎಂ ಕೇಂದ್ರದಲ್ಲಿ ಮೂರು ಹೊಸ ಚಾನಲ್ ಪ್ರಾರಂಭಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. ಇದರಿಂದ ಈ ಭಾಗದ ಕಲೆ, ಸಂಸ್ಕೃತಿ ಮತ್ತು ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಹಲವು ವರ್ಷಗಳ ಬೇಡಿಕೆಯಾಗಿದ್ದ ಎಫ್ಎಂ ಕೇಂದ್ರ ನನ್ನ ಅವಧಿಯಲ್ಲಿ ಮಂಜೂರು ಮಾಡಿ ಬೀದರ್ನಲ್ಲಿ ಕಳೆದ ಜ.19ರಂದು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಲಾಗಿತ್ತು. ಇದೀಗ ಬೀದರ್ ನ ಮೂರು ಸೇರಿ ರಾಜ್ಯದಲ್ಲಿ 42, ದೇಶದಲ್ಲಿ 730 ಹೊಸ ಚಾನಲ್ಗಳ ಪ್ರಾರಂಭಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಖುಷಿ ತಂದಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net