ಬೋಧಕೇತರ ನೌಕರರಿಗೆ ಯುಜಿಸಿ ವೇತನ ನೀಡಿ

VV Memo
Published on

ಬೀದರ್:ದೇಶದ ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೆ ಯುಜಿಸಿ ವೇತನ ನೀಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟ ಆಗ್ರಹಿಸಿದೆ.
ಪ್ರಧಾನಿಗೆ ಬರೆದ ಮನವಿಪತ್ರವನ್ನು ಒಕ್ಕೂಟದ ಸದಸ್ಯ ವೀರಭದ್ರಪ್ಪ ಉಪ್ಪಿನ್ ನೇತೃತ್ವದಲ್ಲಿ ಪಶು ವಿವಿ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಅವರಿಗೆ ಸಲ್ಲಿಸಿದ ಪ್ರಮುಕರು, ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಉದ್ದೇಶಗಳ ಕ್ರಿಯೆಗಾಗಿ ವಿವಿ ಬೋಧಕ ಹಾಗೂ ಬೋಧಕೇತರ ನೌಕರರು ಸಮನಾಗಿ ದುಡಿಯುತ್ತಾರೆ. ಆದರೆ ಬೋಧಕರಿಗೆ ಯುಜಿಸಿ ಹಾಗೂ ಬೋಧಕೇತರರಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿ ನೀಡುತ್ತಿರುವುದು ತಾರತಮ್ಯ. ಅಲ್ಲದೆ ಬೋಧಕೇತರ ನೌಕರರಿಗೆ ಮಾಡುತ್ತಿರುವ ಅನ್ಯಾಯ. ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಉತ್ಪನ್ನದ ಶೇ.6 ಹಣವನ್ನು ಸರ್ಕಾರಿ ಅನುದಾನಿತ ವಿವಿಗಳಿಗೆ ಹಂಚಿಕೆ ಮಾಡಬೇಕು. ಹಳೆಯ ಪಿಂಚಣಿ ಮರು ಜಾರಿ ಹಾಗೂ ಗುತ್ತಿಗೆ ಆಧಾರಿತ ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಮುಖರಾದ ನಾಗಭೂಷಣ ಹುಗ್ಗೆ, ನಾಗೇಂದ್ರ, ಬಾಬಾಗೌಡ ಬಿರಾದಾರ್, ವೈದ್ಯರಾಜ, ವಿಠೋಬಾ, ರವಿ ಶಮರ್ಾ, ಸಾವನ್, ಪ್ರವೀಣ್, ಗುರುಸಿದ್ದ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net