

ಬೀದರ್: ವಿಜಯದಶಮಿಗೆ ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿಯಲ್ಲಿ ಆಯೋಜಿಸಿದ ಧಮ್ಮ ಪರಿವರ್ತನ ದಿನ ಕಾರ್ಯಕ್ರಮಕ್ಕೆ ಹೋಗಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಗೆ ರೈಲಿನ ವ್ಯವಸ್ಥೆ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು, ಹಿಂದಿನ ಸಕರ್ಾರ ಸಮಾಜ ಕಲ್ಯಾಣ ಇಲಾಖೆ ಖರ್ಚಿನಿಂದ ಉಚಿತವಾಗಿ ನಾಗಪುರಕ್ಕೆ ಹೋಗಲು ವ್ಯವಸ್ಥೆ ಮಾಡಿತ್ತು. ಕಳೆದ ವರ್ಷ ಅಧಿಕ ಯಾತ್ರಾರ್ಥಿಗಳು ನೋಂದಣಿ ಮಾಡಿದ್ದರಿಂದ ಬಸ್‌ಗಳ ಸಮಸ್ಯೆ ಎದುರಾಗಿತ್ತು. ಹೀಗಾಗಿ ಬೀದರ್ ದಿಂದ ನಾಗಪುರಕ್ಕೆ ವಿಶೇಷ ರೈಲು ಓಡಿಸಲಾಗಿತ್ತು. ಅದರಂತೆ ಪ್ರಸಕ್ತವೂ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.