ಕೆ.ಇ.ಬಿ. ಪಿಂಚಣಿದಾರರ ಸಂಘಕ್ಕೆ ಅವಿರೋಧ ಆಯ್ಕೆ

K.E.B. Pentioner Sangh
Published on

ಬೀದರ್: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕೆ.ಇ.ಬಿ.) ಪಿಂಚಣಿದಾರರ ಸಂಘದ ಪ್ರಾದೇಶಿಕ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನಗರದ ಸಮಿತಿ ಕಚೇರಿಯಲ್ಲಿ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ನೂತನ ಪದಾಧಿಕಾರಿಗಳು: ಮಧುಕರರಾವ್ ನ್ಯಾಲಕಲಕರ್ (ಅಧ್ಯಕ್ಷ), ಗೋಧೆ ಗುಂಡಪ್ಪ (ಉಪಾಧ್ಯಕ್ಷ), ಶಿವಮೂರ್ತಿ ಬಟನಾಪುರೆ (ಕಾರ್ಯದರ್ಶಿ), ಅಣವೀರಯ್ಯ ಗಿರಣಿ (ಸಹ ಕಾರ್ಯದರ್ಶಿ), ಶಿವರಾಜ ಬುಕ್ಕಾ (ಖಜಾಂಚಿ), ಭಕ್ತರಾಜ ಯದಲಾಪುರೆ, ವಿಶ್ವನಾಥ ಚನ್ನಪ್ಪನೋರ, ನಂದಕುಮಾರ ಕಾಂಬಳೆ, ರಾಮಣ್ಣ ಲಾಡೆ, ಮಹಾಲಿಂಗಪ್ಪ ಬೆಲ್ದಾಳೆ, ಸುಧಾಕರ ನಿಟ್ಟೂರೆ ಹಾಗೂ ಶಕಿನಾ ಬಾನು (ಸದಸ್ಯರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net