ಉಪ್ಪಾರ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ

Dist Uppar Samaj Sangh Pratibha Purskar Programme 26-8-2024 (1) - Copy
Published on

ಬೀದರ್: ಜಿಲ್ಲಾ ಉಪ್ಪಾರ ಸಂಘದ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ದೇವಿ ಮಂದಿರದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ಜಿಲ್ಲೆಯ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಉತ್ತಮ ಸೇವೆ ಸಲ್ಲಿಸುತ್ತಿರುವ ಸಮಾಜದ ಸರ್ಕಾರಿ ನೌಕರರನ್ನೂ ಗೌರವಿಸಲಾಯಿತು.
ಉಪ್ಪಾರ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಪ್ರೇರಣೆ ನೀಡಲು ಹಾಗೂ ಸಾಧಕರನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ತಾನಾಜಿ ಸಗರ್ ಹೇಳಿದರು.
ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರಮುಖರಾದ ಶಿವಾಜಿ ಸಗರ್, ಜಗನ್ನಾಥ ಎಚ್. ಉಪ್ಪಾರ್, ಬಸವರಾಜ, ರವಿ ಬನ್ನಳ್ಳಿ, ಕ್ಯಾನ್‍ಸ್ಟೆಬಲ್ ವಿದ್ಯಾಧರರಾವ್ ಬೆಡ್ಸುರ್, ವಿಜಯಕುಮಾರ, ದೀಪಿಕಾ ಜ್ಯೋತಿ, ಕಾರ್ತಿಕಾ ಜ್ಯೋತಿ, ಮಾರುತಿ ಸಗರ್ ಮಾತನಾಡಿದರು.
ಜಿಲ್ಲಾ ಉಪ್ಪಾರ ಸಂಘದ ಉಪಾಧ್ಯಕ್ಷ ಅನಿಲ್ ಉಪ್ಪಾರ್, ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಉಪ್ಪಾರ್, ಜಂಟಿ ಕಾರ್ಯದರ್ಶಿ ಜಿ.ಎಂ. ಸಗರ್, ಖಜಾಂಚಿ ಶರಣಪ್ಪ ಉಪ್ಪಾರ ಆಣದೂರ, ಸಂತೋಷ ಸಗರ್ ಕೊಳ್ಳೂರ, ಪ್ರಶಾಂತ ಸಗರ್ ಇದ್ದರು. ಬಸವರಾಜ ಬೆಳ್ಳೂರೆ ನಿರೂಪಿಸಿದರು. ಜ್ಞಾನದೇವ್ ಸಗರ್ ಸ್ವಾಗತಿಸಿದರು. ಅಭಂಗ ಸಗರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net