ಅರಣ್ಯ ಸಂರಕ್ಷಣೆಗೆ ಕೈಜೋಡಿಸಿ

rotary club
Published on

ಬೀದರ್: ವರ್ಷದಿಂದ ವರ್ಷಕ್ಕೆ ಅರಣ್ಯ ನಾಶವಾಗುತ್ತಿರುವುದು ಭವಿಷ್ಯಕ್ಕೆ ಮಾರಕ. ಹೀಗಾಗಿ ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ವೃಕ್ಷಥಾನ್ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಕೋರಿದರು.
ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಆಯೋಜಿಸಿದ್ದ ವೃಕ್ಷಥಾನ್ನಲ್ಲಿ ಮಾತನಾಡಿ, ಅರಣ್ಯ ರಕ್ಷಣೆ ಸರ್ಕಾರದ್ದೇ ಕೆಲಸವಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮಲೆನಾಡಿನಂತೆ ಬೀದರ್ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಎಸ್ಪಿ ಪ್ರದೀಪ್ ಗುಂಟಿ ಮಾತನಾಡಿ, ಇಂಥ ಅರ್ಥಪೂರ್ಣ ಕಾರ್ಯಕ್ರಮ ನೋಡಿ ಖುಷಿಯಾಗಿದೆ. ಈ ತರಹದ ಸಮಾರಂಭಗಳು ಪ್ರತಿ ನಗರ ಮತ್ತು ಹಳ್ಳಿಯಲ್ಲಿ ಆಯೋಜಿಸಿ ಅರಣ್ಯ ಸಂರಕ್ಷಣೆಗೆ ಮುಂದಾಗುವ ಅಗತ್ಯವಿದೆ ಎಂದರು.
ಬರೀದ್ಶಾಹಿ ಉದ್ಯಾನದಿಂದ ರೋಟರಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು. ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ 3160 ಗರ್ವನರ್ ಸಾಧು ಗೋಪಾಲಕೃಷ್ಣ, ಎಚ್.ಕೆಇ ಸೊಸೈಟಿ ನಿರ್ದೇಶಕ ಡಾ.ರಜನೀಶ್ ವಾಲಿ, ಪ್ರಮುಖರಾದ ಡಾ.ಎಸ್. ಬಲಬೀರಸಿಂಗ್, ಬಿ.ಜಿ. ಶೆಟಕಾರ್, ಪುನೀತ್ ಸಿಂಗ್, ಆದೀಶ್ ವಾಲಿ, ಪೂಜಾ ಜಾಜ್೯, ಸ್ಫರ್ತಿ ಧನ್ನೂರ, ಉಲ್ಲಾಸ ಕಟ್ಟಿಮನಿ, ಸೋಮಶೇಖರ ಪಾಟೀಲ್, ನಾಗರಾಜ ಕರ್ಪೂರ್, ಡಾ.ರಘು ಕೃಷ್ಣಮೂರ್ತಿ, ಡಾ.ಕಪಿಲ್ ಪಾಟೀಲ್, ಗುಂಡಪ್ಪ ಘೋಡೆ, ಕೃಪಾಸಿಂಧು ಪಾಟೀಲ್ ಇತರರಿದ್ದರು. ಹಾವಶೆಟ್ಟಿ ಪಾಟೀಲ್ ಸ್ವಾಗತಿಸಿದರು. ಸುರೇಶ ಚನ್ನಶೆಟ್ಟಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net