ದಹಿ ಹಂಡಿ ಉತ್ಸವ ಆ.27ರಂದು

prabhu chouhan
Published on

ಔರಾದ್: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ಹಾಗೂ ಪ್ರಭು ಎಂಟರ್ಪ್ರೈಸೆಸ್ನಿಂದ ಮಂಗಳವಾರ (ಆ.27) ಮಧ್ಯಾಹ್ನ 3ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ದಹಿ ಹಂಡಿ ಉತ್ಸವ (ಮೊಸರು ಗಡಿಗೆ ಒಡೆಯುವ ಸ್ಪರ್ಧೆ) ಸೇರಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿ, ಅರ್ಥಪೂರ್ಣ ಜತೆಗೆ ನಮ್ಮ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸಲು ಪೂರಕವಾಗಿ ದಹಿ ಹಂಡಿ ಉತ್ಸವ ಸೇರಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಭು ಎಂಟರ್ಪ್ರೈಸಸ್ ಮುಖ್ಯಸ್ಥರೂ ಆದ ಶಾಸಕ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗಾಗಿ ಎರಡು ವಿಭಾಗದಲ್ಲಿ ಸ್ಪಧರ್ೆ ಇದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 21 ಸಾವಿರ ರೂ., ದ್ವಿತೀಯ 11 ಸಾವಿರ ಹಾಗೂ ತೃತೀಯ ಬಹುಮಾನ 7 ಸಾವಿರ ರೂ. ಮತ್ತು ಪಾರಿತೋಷಕ ವಿತರಿಸಲಾಗುವುದು. ಶ್ರೀಕೃಷ್ಣ ವೇಷಧಾರಿ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವುದು. 10 ವರ್ಷದೊಳಗಿನ ಮಕ್ಕಳು ಮಾತ್ರ ವೇಷಧಾರಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.
ಮಹಾಭಾರತದಲ್ಲಿ ಶ್ರೀಕೃಷ್ಣ ಬೋಧಿಸಿದ ಗೀತೆ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದೆ. ಎಲ್ಲರಿಗೂ, ಎಲ್ಲ ಸಂದರ್ಭ ಮತ್ತು ಎಲ್ಲ ಕಾಲಕ್ಕೂ ಅನ್ವಯಿಸುವಂಥ ಸಾರವನ್ನು ಒಳಗೊಂಡಿದೆ. ಸ್ಪೂರ್ತಿದಾಯಕವಾಗಿರುವ ಶ್ರೀಕೃಷ್ಣನ ಜೀವನದಿಂದ ನಾವು ಸಾಕಷ್ಟು ನೀತಿಗಳನ್ನು ಕಲಿಯಬಹುದು. ಇಂಥ ವಿಷಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ನಮ್ಮ ಪರಂಪರೆ ಉಳಿಸಿ ಬೆಳೆಸಲು ಇಂಥ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಒಂದು ತಂಡದಲ್ಲಿ ಕನಿಷ್ಠ 12 ಜನರಿರಬೇಕು. ಆಸಕ್ತರು ಮಂಗಳವಾರ ಬೆಳಗ್ಗೆ 11ರೊಳಗೆ ಶಿವರಾಜ ಅಲ್ಮಾಜೆ (94486 05300), ಶಿವರಾಜ ಹಳ್ಳೆ (81239 79550) ಅವರನ್ನು ಸಂಪಕರ್ಿಸಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಿದ ದಹಿ ಹಂಡಿ ಉತ್ಸವ, ವೇಷಭೂಷಣ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಮತ್ತು ಕಾರ್ಯಕ್ರಮ ಶಾಂತಿ, ಸೌಹಾರ್ದದಿಂದ ನಡೆಯಲು ಸಹಕರಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net