

ಬೀದರ್: ಕ್ರೀಡೆ ಹಾಗೂ ಸ್ಪರ್ಧೆಗಳಲ್ಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಹಿಂಜರಿಯಬಾರದು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಹೇಳಿದರು.
ನಗರದ ಜನಸೇವಾ ಶಾಲೆಯಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿದ ಅವರು, ಸೋಲು-ಗೆಲುವು ಸಾಮಾನ್ಯ. ಹೀಗಾಗಿ ಯಾವುದೇ ಭಯ ಇಲ್ಲದೆ ಪ್ರತಿಭೆಯನ್ನು ಅಭಿವ್ಯಕ್ತಪಡಿಸಬೇಕು. ಸ್ಪರ್ಧೆಗಳು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿವೆ. ಮಕ್ಕಳ ಜ್ಞಾನ ವೃದ್ಧಿಗೂ ಸಹಕಾರಿ ಆಗಲಿವೆ ಎಂದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು ಹಾಗೂ ಈ ಭಾಗದ ದೇಸಿ ಕಲೆಗಳಿಗೆ ಉತ್ತೇಜನ ನೀಡಲು ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತ ವಿದ್ಯಾರ್ಥಿಗಳು ಸೆ.22ರಂದು ಕಲಬುರಗಿಯಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದೇವಿಪ್ರಸಾದ್ ಕಲಾಲ್, ಮಹ್ಮದ್ ರಫಿ, ಅಕ್ಷಯ್ ಮುದ್ದಾ, ಗುರುನಾಥ ವಟಗೆ, ಯಶವಂತರಾವ ಬಿರಾದಾರ್, ಗುಂಡಯ್ಯ ತೀರ್ಥ, ಸಂಗಮೇಶ ಜವಾದಿ, ಲೋಕೇಶ್ ಮೋಳಕೇರೆ, ಪ್ರಶಾಂತ ಸಿಂಧೆ, ಗಣಪತಿ ಹಡಪದ ಇದ್ದರು.
ಬಸವರಾಜ ಅಷ್ಟಗಿ ಸ್ವಾಗತಿಸಿದರು. ರೇವಣಸಿದ್ದ ಜಾಡರ್ ನಿರೂಪಣೆ ಮಾಡಿದರು. ಕಾಮಶೆಟ್ಟಿ ಚಿಕ್ಕಬಸೆ ವಂದಿಸಿದರು. ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ 14 ಸ್ಪರ್ಧೆಗಳಲ್ಲಿ ಜಿಲ್ಲೆಯ ಎಂಟು ತಾಲೂಕು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆ ವಿಜೇತರು
ಶಿಶು ಮಂದಿರ ವಿಭಾಗ: ಕಥೆ ಹೇಳುವುದು-ಶ್ರಾವ್ಯ ಸಂಗಮೇಶ. ಪ್ರಾಥಮಿಕ ವಿಭಾಗ: ಚಿತ್ರಕಲೆ-ಸಾಕ್ಷಿ ಸಂಗಪ್ಪ. ಭಾಷಣ-ವೈಷ್ಣವಿ ದೀಪಕ್. ಪ್ರೌಢಶಾಲಾ ವಿಭಾಗ: ಶಾಸ್ತ್ರೀಯ ನೃತ್ಯ-ಪ್ರಿಯಾಂಕಾ ಸಂಜುಕುಮಾರ. ರಂಗೋಲಿ-ಸಾಕ್ಷಿ ಹುಮನಾಬಾದ್. ಹಗ್ಗ ಜಿಗಿದಾಟ-ವಿಜಯಲಕ್ಷ್ಮೀ ಸಂಗಮೇಶ. ಸೂರ್ಯ ನಮಸ್ಕಾರ-ಅಮರ ನಾಗನಾಥ.ಚಿತ್ರಕಲೆ-ಪ್ರಜ್ವಲ್ ದೀಪಕ್. ಭಾಷಣ: ಅನುಜಾ ನಂದಕುಮಾರ. ರಸಪ್ರಶ್ನೆ (ಸಾಮಾನ್ಯ ಜ್ಞಾನ)-ಕೇದಾರ್ ಸೋಮಶೇಖರ, ಕೇದಾರಲಿಂಗ ಗಂಗಾಧರ. ರಸಪ್ರಶ್ನೆ(ಸಾಮಾನ್ಯ ವಿಜ್ಞಾನ-ತಂತ್ರಜ್ಞಾನ)-ರಹೀಮ್, ರೋಹನ್. ಸಮೂಹ ಗಾಯನ: ಶ್ರೇಯಾ, ಸ್ನೇಹಾ, ದೀಪಿಕಾ, ಶ್ರಾವಣಿ, ಸಾಕ್ಷಿ. ಗುಂಪು ಸ್ಪರ್ಧೆ: ಬಾಲಕಿಯರ ವಿಭಾಗದ ಭಜನೆ-ದತ್ತಗಿರಿ ಶಾಲೆಯ ಶ್ರೀನಿ ಮತ್ತು ತಂಡ. ಬಾಲಕರ ವಿಭಾಗದ ಭಜನೆ-ರವೀಂದ್ರ ಶಾಲೆ ತಂಡ. ಬಾಲಕಿಯರ ವಿಭಾಗದ ಕೋಲಾಟ: ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ತಂಡ. ಬಾಲಕರ ವಿಭಾಗದ ಕೋಲಾಟ-ತುಕಾರಾಮ ಚಬ್ಬೆ ಮತ್ತು ತಂಡ. ಎಲ್ಲರೂ ಪ್ರಥಮ ಸ್ಥಾನ ಪಡೆದು ಗೆಲುವು ಸಾಸಿದ್ದಾರೆ.