ಪೂರ್ಣಿಮಾ ಶೈಕ್ಷಣಿಕ ಸಮ್ಮೇಳನಾಧ್ಯಕ್ಷೆ

Purnima
Published on

ಬೀದರ್: ಜಿಲ್ಲಾ ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷರಾದ ಸಾಹಿತಿ ಡಾ.ಪೂರ್ಣಿಮಾ ಜಾಜ್೯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ಉತ್ತಮ ರೀತಿಯಲ್ಲಿ ಶಾಲೆಗಳನ್ನು ನಡೆಸುತ್ತಿರುವ, ಸಾಹಿತಿಯೂ ಆದ ಪೂರ್ಣಿಮಾ ಅವರನ್ನು ಶೈಕ್ಷಣಿಕ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸೆಪ್ಟೆಂಬರ್ ಮೊದಲ ವಾರ ಸಮ್ಮೇಳನ ನಡೆಯಲಿದ್ದು, ಭಾಗವಹಿಸುವ ಆಸಕ್ತರು ಪರಿಷತ್ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಬಳಿ ನೋಂದಾಯಿಸಬೇಕೆಂದು ಕೋರಿದ್ದಾರೆ.
ನಗರ ನಿವಾಸಿಯಾದ ಪೂರ್ಣಿಮಾ ಜಾಜ್೯ ಎಂಎ, ಎಂ.ಫಿಲ್, ಪಿಎಚ್.ಡಿ ಪೂರೈಸಿದ್ದಾರೆ. ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ. ಈ ಹಿಂದೆ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬೀದರ್ ಶಾಖೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ಪೂರ್ಣಿಮಾ ರಚಿತ ಕತ್ತಲ ಇಬ್ಬನಿ ಬಣ್ಣದ ಚಿತ್ತಾರ ಕವನ ಸಂಕಲನ ಹಾಗೂ ಗಿಡದ ಬುಡದ ಹೆಣ್ಣು ಇತರ ಕಥೆಗಳು ಪ್ರಕಟಗೊಂಡಿವೆ. ಇವರ ಸಾಧನೆಗೆ ಅತ್ಯುತ್ತಮ ಸಮಾಜ ಸೇವಕಿ ಸೇರಿ ವಿವಿಧ ಪ್ರಶಸ್ತಿಗಳು ಅರಸಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net