ಮಹಾಪ್ರಸಾದ ಕಾರ್ಯಕ್ರಮ ಭಾನುವಾರ

images (1)
Published on

ಬೀದರ್: ಶ್ರೀ ನರಸಿಂಹ ಸ್ವಾಮಿ ಕಲ್ಯಾಣ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಾ ಪ್ರಸಾದ ಕಾರ್ಯಕ್ರಮ ಭಾನುವಾರ ಬೆಳಗ್ಗೆ 10ಕ್ಕೆ ಇಲ್ಲಿನ ಶ್ರೀ ನರಸಿಂಹ ಸ್ವಾಮಿ ಝರಣಾ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಸಚಿವ ರಹೀಮ್ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಇತರರು ಪಾಲ್ಗೊಳ್ಳುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್‌ನ ಅಶೋಕ ರೇಜಂತಲ್, ದಿಗಂಬರ ಪೋಲಾ, ಪ್ರಶಾಂತ ರುದ್ರಾವರ್, ನಾರಾಯಣ ರೋಲಾಕ್ಸ್, ಪ್ರಭುರಾಜ ಚಿಂಚೋಳಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net