ಹೈನು ಅಭಿವೃದ್ಧಿಗೆ ಹೆಗ್ಗಡೆ ಅನುದಾನ

dharmasthala sangha
Published on

ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಹೈನುಗಾರಿಕೆ ಅಭಿವೃದ್ಧಿಗಾಗಿ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಐದು ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಬೀದರ್ ತಾಲೂಕಿನ ಒಕ್ಕೂಟ ಅಧ್ಯಕ್ಷರ ಸಮಾವೇಶ ಉದ್ಘಾಟಿಸಿದ ಅವರು, ಎರಡು ವರ್ಷಗಳಿಂದ ತಲಾ 2.50 ಕೋಟಿಯಂತೆ ಹೈನು ಅಭಿವೃದ್ಧಿಗೆ ಹೆಗ್ಗಡೆ ಅವರು ಜಿಲ್ಲೆಗೆ ಅನುದಾನ ನೀಡಿದ್ದರಿಂದ ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದರು.
ಮಹಿಳೆಯರನ್ನು ವಿವಿಧ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಹೊರತರಬೇಕು. ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿಯೂ ಸಬಲರಾಗಬೇಕು ಎಂಬ ಸದುದ್ದೇಶದಿಂದ ಹೆಗ್ಗಡೆ ಅವರು ಹಲವು ಯೋಜನೆಗಳ ಮೂಲಕ ಆರ್ಥಿಕ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆ ಬಡ ವಿದ್ಯಾರ್ಥಿಗಳ ವೃತ್ತಿಪರ ಕೋಸರ್್ಗಳ ನೆರವಿಗಾಗಿ 1.24 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ. ಮಹಿಳಾ ಸಬಲೀಕರಣ, ಕೃಷಿ ಸೇರಿ ನಾನಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಧರ್ಮಸ್ಥಳ ಸಂಘ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಜಿಲ್ಲೆಯಲ್ಲಿ 550 ಒಕ್ಕೂಟಗಳಿದ್ದು, 1.50 ಲಕ್ಷ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಬೀದರ್ ತಾಲೂಕಿನಲ್ಲಿ 168 ಒಕ್ಕೂಟಗಳಿವೆ. ಹಳ್ಳಿಗೊಂದು ಒಕ್ಕೂಟ ಸ್ಥಾಪಿಸಿ ಆ ಗ್ರಾಮದ ನಿರ್ವಹಣೆ, ಮಹಿಳೆಯರ ಆರ್ಥಿಕಾಭಿವೃದ್ಧಿ ಜಾಗೃತಿ ಸೇರಿ ನಾನಾ ಕೆಲಸ ಮಾಡಲಾಗುತ್ತಿದೆ.
ಬೀದರ್ ದಕ್ಷಿಣ ಯೋಜನಾಧಿಕಾರಿ ಸಂಜಯಕುಮಾರ, ಉತ್ತರ ಯೋಜನಾಧಿಕಾರಿ ಧರ್ಮೇಂದ್ರ, ಮಹಾಂತೇಶ, ರಮೇಶ, ನಂದಕುಮಾರ ಇತರರಿದ್ದರು.

ಜಿಲ್ಲೆಗೆ ಹೆಗ್ಗಡೆ ಭೇಟಿ ಸೆ.5ರಂದು
ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಸೆ.5ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ನಗರದ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿರೂಪಾಕ್ಷ ಗಾದಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net