ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಿ

bjp yuv morcha
Published on

ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಯುವ ಮೋರ್ಚಾದಿಂದ ನ್ಯೂ ಟೌನ್ ಠಾಣೆಗೆ ಮಂಗಳವಾರ ದೂರು ಸಲ್ಲಿಸಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದನ್ನು ರಾಜ್ಯಪಾಲರು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದರೆ ಬಾಂಗ್ಲಾ ಅಧ್ಯಕ್ಷರು ದೇಶಬಿಟ್ಟು ಓಡಿ ಹೋದಂಥ ಸ್ಥಿತಿಯನ್ನು ನಾವು ನಿರ್ಮಿಸುತ್ತೇವೆ ಎಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನೆ ಮತ್ತು ದೇಶದ್ರೋಹಿ ಹೇಳಿಕೆ ನೀಡಿದ ಡಿಸೋಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷರಡ್ಡಿ ಆಣದೂರ, ಪ್ರಧಾನ ಕಾರ್ಯದರ್ಶಿ ವೀರೇಶ ಸ್ವಾಮಿ, ಪ್ರಮುಖರಾದ ರಮೇಶ ಕಲ್ಲೂರ, ಸಂದೀಪ ಪಾಟೀಲ್, ಪುಷ್ಪಕಕುಮಾರ ಜಾಧವ್, ಬಸವ ಮೂಲಗೆ, ಸಾಯಿನಾಥ ಪಾಟೀಲ್, ಶಿವು ಸುಲ್ತಾನಪುರೆ, ಗುರು ಪಾಪಡೆ, ಅರವಿಂದ ಬುಳ್ಳಾ, ಶರಣು ಬಿರಾದಾರ್, ಬಾಲಾಜಿ ಪಾಟೀಲ್, ಸಂದೀಪ ಪಸರ್ಗೆ, ಕೃಷ್ಣ ಉಪ್ಪಾರ, ಅಜಯ, ಆಕಾಶ ರಾಜಗೀರಾ, ವೆಂಕಟ ಆಣದೂರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net