ಜಿಲ್ಲಾದ್ಯಂತ ರಾಖಿ ಹಬ್ಬದ ಸಂಭ್ರಮ

Rakhi-1
Published on

ಬೀದರ್: ನಗರ ಸೇರಿದಂತೆ ಜಿಲ್ಲಾದ್ಯಂತ ರಕ್ಷಾ ಬಂಧನ ಹಬ್ಬ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ಬಾಂಧವ್ಯ ಗಟ್ಟಿಗೊಳಿಸಿದರು. ರಾಖಿ ಕಟ್ಟಿದ ಸಹೋದರಿಯಿಂದ ಸಹೋದರರು ಆಶೀರ್ವಾದ ಪಡೆದರಲ್ಲದೆ ಕಾಣಿಕೆ ಕೊಟ್ಟು ಖುಷಿ ಹಂಚಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು-ಬಳಗದವರ ಜತೆ ರುಚಿ ಸವಿಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net