

ಬೀದರ್: ಬ್ರಹ್ಮಕುಮಾರಿ ಸಹೋದರಿಯರು ರಕ್ಷಾ ಬಂಧನ ಪ್ರಯುಕ್ತ ಖುಷಿಕೇಶ್ ಶಿಕ್ಷಣ ಸಂಸ್ಥೆಯ ಸಂಚಾಲಿತ ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದರು. ಆರತಿ ಬೆಳಗಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು.
ರಕ್ಷಣೆಯ ಬಂಧವೇ ರಕ್ಷಾ ಬಂಧನ ಎಂದು ಕಾರ್ಯಕ್ರಮವನ್ನುಉದ್ದೇಶಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾರ್ವತಿ ಬಹೆನ್‍ಜಿ ಹೇಳಿದರು.
ರಕ್ಷಾ ಬಂಧನ ಭಾರತೀಯ ಸಂಸ್ಕøತಿಯಲ್ಲಿ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ ಎಂದು ಶಾಲೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ನುಡಿದರು.
ಅನುಸೂಯಾ ಬಹೆನ್‍ಜಿ, ಕವಿತಾ ಬಹೆನ್‍ಜಿ, ಪ್ರತಿಭಾ ಬಹೆನ್‍ಜಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ನೀಲಮ್ಮ ಗಜಲೆ ಸ್ವಾಗತಿಸಿದರು. ಜ್ಯೋತಿ ಸಂಗೊಳ್ಳಿ ನಿರೂಪಿಸಿದರು. ಸಹ ಶಿಕ್ಷಕಿ ಅಲ್ಕಾವತಿ ವಂದಿಸಿದರು.