ಅರಿವು ಸ್ವಯಂ ಸೇವಾ ಸಂಸ್ಥೆ ಉದ್ಘಾಟನೆ

Aruivu Society-1
Published on

ಬೀದರ್: ಇಲ್ಲಿಯ ಹೋಟೆಲ್ ಕೃಷ್ಣ ರಿಜೆನ್ಸಿಯಲ್ಲಿ ಅರಿವು ಸ್ವಯಂ ಸೇವಾ ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ಶುಕ್ಲತೀರ್ಥ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ ಕಾಮಣ್ಣೋರ್ ಉದ್ಘಾಟಿಸಿ ಮಾತನಾಡಿ, ಸಂಘ- ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷರೂ ಆದ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ವಿಶ್ವಕರ್ಮ ಮಾತನಾಡಿ, ಸಂಸ್ಥೆಯಿಂದ ಬರುವ ದಿನಗಳಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಇದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ ಹಾಗೂ ಸಂಸ್ಥೆಯ  ಗೌರವಾಧ್ಯಕ್ಷ ವಿನೋದಕುಮಾರ ಹೊನ್ನಾ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ರಾಜು ಸ್ವಾಮಿ, ಸಂದೀಪ್ ಪಾಟೀಲ, ಬಸವರಾಜ ಹೆಗ್ಗೆ, ಶಿವಾನಂದ ಗೋರಟಾ, ರಾಜು ಸ್ವಾಮಿ ಇದ್ದರು. ಶಿಲ್ಪಾ ಮಜಗೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net