ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ದೇಶಭಕ್ತಿ ಗೀತೆಗಳ ಮೆರುಗು

Saptswar Scociety Sangeet Programme At Saibaba Mandir (1)
Published on

ಬೀದರ್: ಔರಾದ್ ತಾಲ್ಲೂಕಿನ ನಾಗಮಾರಪಳ್ಳಿಯ ಸಪ್ತಸ್ವರ ಕಲಾ ಸಂಸ್ಥೆಯಿಂದ ಇಲ್ಲಿಯ ನಂದಿ ಪೆಟ್ರೋಲ್ ಬಂಕ್ ಹಿಂದುಗಡೆಯ ಸಾಯಿಬಾಬಾ ಮಂದಿರದಲ್ಲಿ ದೇಶಭಕ್ತಿ ಗೀತೆಗಳ ಗಾಯನದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು
ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಚಿಮಕೋಡೆ ನಾಗಮಾರಪಳ್ಳಿ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಮಕ್ಕಳು ವಚನ ಹಾಗೂ ದಾಸರ ಪದಗಳ ಗಾಯನ ಮಾಡಿ ರಂಜಿಸಿದರು.
ಮಕ್ಕಳಿಗೆ ತಿರಂಗಾ ಧ್ವಜಗಳನ್ನು ಉಚಿತವಾಗಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net