ಶಾಲೆಗೆ ಫಾಗಿಂಗ್ ಯಂತ್ರ ಕೊಡುಗೆ

dinada chitra
Published on

ಬೀದರ್: ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಹಾಗೂ ಸದಸ್ಯ ವಿಜಯಕುಮಾರ್ ಜಂಟಿಯಾಗಿ ಫಾಗಿಂಗ್ ಯಂತ್ರ ಕೊಡುಗೆ ನೀಡಿದ್ದಾರೆ.
ಯಂತ್ರದ ಬೆಲೆ ರೂ. 12 ಸಾವಿರ ಆಗಿದ್ದು, ಈ ಪೈಕಿ ನರಸಪ್ಪ ರೂ. 9 ಸಾವಿರ ಹಾಗೂ ವಿಜಯಕುಮಾರ್ ರೂ. 3 ಸಾವಿರ ಭರಿಸಿದ್ದಾರೆ.
ಶಾಲೆಯಲ್ಲಿ ಗುರುವಾರ ಪ್ರಾಚಾರ್ಯ ಶರಣಪ್ಪ ಬಿರಾದಾರ್ ಅವರಿಗೆ ಯಂತ್ರ ಹಸ್ತಾಂತರಿಸಿದರು.
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಯಂತ್ರ ಕೊಡುಗೆಯಾಗಿ ಕೊಡಲಾಗಿದೆ. ಡೆಂಗೆ, ಮಲೇರಿ ಯಾದಂತಹ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣಕ್ಕೆ ಯಂತ್ರ ಸಹಕಾರಿಯಾಗಲಿದೆ ಎಂದು ನರಸಪ್ಪ ಜಾನಕನೋರ ಹೇಳಿದರು.
ಉಪ ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ, ಶಿಕ್ಷಕ ದೇವಿ ದಾಸ್ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net