

ಬೀದರ್: ಶ್ರಾವಣ ನಿಮಿತ್ತ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಗುರುನಾನಕ ಕಾಲೊನಿಯಲ್ಲಿ ವಚನಾನುಭವ ಕಾರ್ಯಕ್ರಮ ನಡೆಯಿತು.
ಪತಿ, ಪತ್ನಿ ಪರಸ್ಪರ ಅರ್ಥೈಸಿಕೊಂಡು ಜೀವನ ನಡೆಸಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಉದ್ಘಾಟನೆ ನೆರವೇರಿಸಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಹೇಳಿದರು.
ಹಾಳಾಗುತ್ತಿರುವ ಕುಟುಂಬ ವ್ಯವಸ್ಥೆಯನ್ನು ಸರಿಪಡಿಸುವ ಮಹತ್ವದ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಸಾಹಿತಿ ಪಾರ್ವತಿ ಸೋನಾರೆ ಅಭಿಪ್ರಾಯಪಟ್ಟರು.
ಮಹಿಳೆಯರು ಹರಟೆಯಲ್ಲಿ ಕಾಲಹರಣ ಮಾಡಬಾರದು. ಮೌಲ್ಯಯುತ ಜೀವನ ನಡೆಸಬೇಕು ಎಂದು ತಿಳಿಸಿದರು.
ವಚನಗಳು ಜೀವನ ಸೂತ್ರವನ್ನು ಒಳಗೊಂಡಿವೆ. ಹೀಗಾಗಿ ನಿತ್ಯ ಒಂದೆರಡು ವಚನಗಳನ್ನು ಓದಬೇಕು. ಅವುಗಳ ಅರ್ಥ ಅರಿಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಜಗದೇವಿ ದುಬಲಗುಂಡೆ ಹೇಳಿದರು.
ಸುಜಾತಾ, ಚಿನ್ನಮ್ಮ ಬಿರಾದಾರ, ಸರಸ್ವತಿ ರೆಡ್ಡಿ ಇದ್ದರು.
ಉಷಾ ವಸಂತ ಪ್ರಾರ್ಥನೆ ಗೀತೆ ಹಾಡಿದರು. ಮಂಗಲಾ ಭಾಗವತ್ ಸ್ವಾಗತಿಸಿದರು. ರೂಪಾ ಪಾಟೀಲ ನಿರೂಪಿಸಿದರು. ಜಯದೇವಿ ಯದಲಾಪುರೆ ವಂದಿಸಿದರು. ಗುರುನಾನಕ ಕಾಲೊನಿಯ ಮಹಿಳೆಯರು ಪಾಲ್ಗೊಂಡಿದ್ದರು.