ಕಾಲ್ನಡಿಗೆಯಲ್ಲಿ ಕಾವಡ ಯಾತ್ರೆ

kavad
Published on

ಬೀದರ್: ಪಾಪನಾಶ ಶಿವಲಿಂಗ ದೇವಸ್ಥಾನದ ಭಜನಾ ಮಂಡಳಿ ನೇತೃತ್ವದಲ್ಲಿ ಭಕ್ತರು ಸೋಮವಾರ ಕಾವಡ ಯಾತ್ರೆ ನಡೆಸಿದರು.
ಭಾಲ್ಕಿ ತಾಲೂಕಿನ ಗಾಯಮುಖದ ಶ್ರೀ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮಡಿ ಸ್ನಾನ ಮಾಡಿ ಕೇಸರಿ ಬಟ್ಟೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿಂದಿಗೆಗಳಲ್ಲಿ ಅಲ್ಲಿನ ಪವಿತ್ರ ನೀರು ಸಂಗ್ರಹಿಸಿ ಕಟ್ಟಿಗೆಯ ಎರಡು ಭಾಗಕ್ಕೆ ಕಟ್ಟಿಕೊಂಡು ಬೀದರ್-ಭಾಲ್ಕಿ ಹೆದ್ದಾರಿ ಮೂಲಕ ಹೆಜ್ಜೆ ಹಾಕಿದರು.
ಮಹಿಳೆಯರು, ಹಿರಿಯರು ಸೇರಿ ಎಲ್ಲ ವಯೋಮಾನದವರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಗಾಯಮುಖದಿಂದ 16 ಕಿಮೀ ಕಾಲ್ನಡಿಗೆಯಲ್ಲಿ ಆಗಮಿಸಿ ಪವಿತ್ರ ನೀರಿನಿಂದ ಪಾಪನಾಶ ಶಿವಲಿಂಗಕ್ಕೆ ಅಭಿಷೇಕ ಮಾಡಿ ಯಾತ್ರೆ ಕೊನೆಗೊಳಿಸಿದರು.
ಪ್ರಮುಖರಾದ ಶಿವಕುಮಾರ ಶೆಟಕಾರ್, ಬಸವರಾಜ ಶೀಲವಂತ, ಸಂತೋಷ ಜಗದಾಳೆ, ಧೂಳಪ್ಪ, ಅಂಬರೀಶ್, ಅರವಿಂದ, ಮಲ್ಲಿಕಾಜರ್ುನ, ರಾಜಕುಮಾರ ಸಂಗೊಳಗಿ, ವಿಜಯಕುಮಾರ ಪಾಟೀಲ್, ರಾಜಕುಮಾರ ಸ್ವಾಮಿ, ಪ್ರಶಾಂತ ಪಾಟೀಲ್, ಓಂಕಾರ ಮಜಗೆ, ಮಹೇಶ ಪಾಟೀಲ್, ರವಿ ದಾನಾ, ಪ್ರಭಾವತಿ, ವಿಜಯಲಕ್ಷ್ಮಿ, ರೀತು ಪಾಟೀಲ್, ಸರಸ್ವತಿ, ಸುವರ್ಣಾ, ಮಲ್ಲಮ್ಮ, ಜ್ಯೋತಿ, ಶ್ರೀದೇವಿ ಇತರರಿದ್ದರು. ಈ ಬಾರಿಯ ಶ್ರಾವಣ ಮಾಸದ ಐದು ಸೋಮವಾರ ಕಾವಡ ಯಾತ್ರೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net