

ಭಾಲ್ಕಿ: ಇಲ್ಲಿನ ಬಿಕೆಐಟಿ ತಾಂತ್ರಿಕ ಮಹಾವಿದ್ಯಾಲಯ ಇಸಿಇ ವಿಭಾಗದ ಸಹಾಯಕ ಪ್ರಾಧ್ಯಾಪಕ ಸತೀಶಕುಮಾರ ಕನ್ನಾಳೆ ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ. ಪ್ರದಾನ ಮಾಡಿದೆ.
ಡಾ.ನಾಗಶೆಟ್ಟಪ್ ಬಿರಾದಾರ್ ಮಾರ್ಗದರ್ಶನದಲ್ಲಿ ಡಿಜೈನ್ ಆ್ಯಂಡ್ ಡೇವಲಪಮೆಂಟ್ ಆಫ್ ಅಲ್ಟ್ರಾ ವೈಡ್ಬ್ಯಾಂಡ್ ಮೈಕ್ರೋಸ್ಟ್ರಿಪ್ ಆ್ಯಂಟಿನ್ನಸ್ ಫಾರ್ ವೈರಲೆಸ್ ಕಮ್ಯೂನಿಕೇಷನ್ ವಿಷಯದ ಮೇಲೆ ಪ್ರಬಂಧ ಮಂಡಿಸಲಾಗಿದೆ.