

ಬೀದರ್: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬಿಜೆಪಿ ಯುವ ಮೋರ್ಚಾ ನಗರ ಮಂಡಲ ವತಿಯಿಂದ ಇಲ್ಲಿನ ಭಗತ್ ಸಿಂಗ್ ಪ್ರತಿಮೆ ಹಾಗೂ ವೃತ್ತವನ್ನು ಶುಚಿಗೊಳಿಸಲಾಯಿತು.
ಹರ್ ಘರ್ ತಿರಂಗಾ ಅಭಿಯಾನ ಅಡಿಯಲ್ಲಿ ನಗರದ ವಿವಿಧ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ತಿಳಿಸಿದ್ದಾರೆ.
ಮೋರ್ಚಾ ನಗರ ಅಧ್ಯಕ್ಷ ಸಂದೀಪ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಪುಷ್ಪಕಕುಮಾರ ಜಾಧವ್, ಪ್ರಮುಖರಾದ ಸುಭಾಷ ಮಡಿವಾಳ, ಸುನೀಲ ಗೌಳಿ, ಗಣೇಶ ಭೋಸ್ಲೆ, ನರೇಶ್ ಗೌಳಿ, ನೀತಿನ್ ಎನ್., ವಿಜಯಕುಮಾರ ಹೆಗ್ಗೆ, ಸಂಗಮೇಶ ಗುಮ್ಮ, ರಾಜು ಜಮಾದಾರ್, ವೀರೇಶ ಸ್ವಾಮಿ, ಬಸವ ಮೂಲಗೆ, ರಘು ಚಿದ್ರೆ ಇತರರಿದ್ದರು.