

ಬೀದರ್: ಸಿದ್ಧಾಂತ ಶಿಖಾಮಣಿ ಸುಂದರ ಜೀವನದ ಸೂತ್ರಗಳನ್ನು ಒಳಗೊಂಡ ಶ್ರೇಷ್ಠ ಗ್ರಂಥವಾಗಿದ್ದು, ಪ್ರತಿಯೊಬ್ಬರೂ ಅದನ್ನು ಪಾರಾಯಣ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರಿಂದ ಸಿದ್ಧಾಂತ ಶಿಖಾಮಣಿ ಗ್ರಂಥ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಂಥದ ಪ್ರಚಾರಕ್ಕಾಗಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಆಗಸ್ಟ್ 4 ರಿಂದ ಗ್ರಂಥ ಅರ್ಪಣೆ ಅಭಿಯಾನ ಆರಂಭಿಸಿದ್ದು, ಕೇಂದ್ರ, ರಾಜ್ಯ ಸಚಿವರು, ಸಂಸದರು, ವಿದೇಶಿ ರಾಯಭಾರಿಗಳು ಸೇರಿದಂತೆ ಈವರೆಗೆ 300 ಗಣ್ಯರಿಗೆ ಗ್ರಂಥ ವಿತರಿಸಲಾಗಿದೆ ಎಂದು ಶಿವಯ್ಯ ಸ್ವಾಮಿ ತಿಳಿಸಿದರು.
ಗ್ರಂಥದ ಪಾರಾಯಣದಿಂದ ಧರ್ಮದ ಮಾರ್ಗದಲ್ಲಿ ನಡೆಯಲು ಪ್ರೇರಣೆ ಸಿಗಲಿದೆ. ಸೆಪ್ಟೆಂಬರ್ 2 ರ ವರೆಗೆ ಅಭಿಯಾನ ಜರುಗಲಿದೆ ಎಂದು ಹೇಳಿದರು.
ಡಾ. ಅನುಸೂಯಾ ಸಿ.ಎನ್. ಮಂಜುನಾಥ, ಧಾರವಾಡದ ಬಸವರಾಜ ಪಾಟೀಲ ಮತ್ತಿತರರು ಇದ್ದರು.