ತನಿಖೆಗೆ ಒತ್ತಾಯ

Amit suryavanshi
Published on

ಬೀದರ್: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ(ಸೆಬಿ)ದ ಅಧ್ಯಕ್ಷೆ ಮಾಧಬಿ ಬುಚ್ ಹಾಗೂ ಅವರ ಪತಿ ಧವಲ್ ಬುಚ್ ಅವರು ಅದಾನಿ ಸಮೂಹದ ಕಡಲಾಚೆ ನಿಧಿಗಳಲ್ಲಿ ಮಾಡಿರುವ ಹೂಡಿಕೆ ಕುರಿತು ತನಿಖೆ ನಡೆಸಬೇಕು ಎಂದು ಬೀದರ್‍ನ ಷೇರು ಮಾರುಕಟ್ಟೆ ಸಲಹೆಗಾರ ಅಮಿತ್ ಸೂರ್ಯವಂಶಿ ಒತ್ತಾಯಿಸಿದ್ದಾರೆ.
ಕಡಲಾಚೆ ಹೂಡಿಕೆ ಮಾಡಿದ್ದಾರೆ ಎನ್ನಲಾದ ಹಿಂಡೆನ್‍ಬರ್ಗ್ ಸಂಶೋಧನಾ ವರದಿಯು ಹೂಡಿಕೆದಾರರಲ್ಲಿ ಭೀತಿ ಸೃಷ್ಟಿಸಿದೆ. ಹೀಗಾಗಿ ಪ್ರಧಾನಿ ಹಾಗೂ ಕೇಂದ್ರದ ಹಣಕಾಸು ಸಚಿವರು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಅಮಾಯಕ ಹೂಡಿಕೆದಾರರು ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಪ್ರಮಾಣೀಕೃತ ತಜ್ಞರ ಸಲಹೆಯೊಂದಿಗೆ ಹೂಡಿಕೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net