

ಬೀದರ್: ಭಾಲ್ಕಿ-ಬೀದರ್ ರಾಷ್ಟ್ರೀಯ ಹೆದ್ದಾರಿಯ ಅತಿವಾಳ ಕ್ರಾಸ್ ಬಳಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾದ ಘಟನೆ ನಡೆದಿದೆ.
ಹೊನ್ನಿಕೇರಿ ತಾಂಡಾದ ಅನೀತಾ ನಾಗೇಶ (40), ನಾಗೂರಾ (ಬಿ) ನಿವಾಸಿ ರಮೇಶ (32), ಹೊನ್ನಿಕೇರಿ ಗ್ರಾಮದ ಅಂಜನಾಬಾಯಿ ಸಿದ್ರಾಮ (35) ಮೃತಪಟ್ಟಿದ್ದಾರೆ.
ಅಮಲಾಪುರದ ಆಟೋ ಚಾಲಕ ನರಸಿಂಹ (23), ಹೊನ್ನಿಕೇರಿ ತಾಂಡಾದ ಗಂಗೂಬಾಯಿ ಶಿವಕುಮಾರ (40), ಅನೀತಾ ತುಕರಾಮ ಪವಾರ್ (30) ಹಾಗೂ ರಾಮಲು ಬಾಳಪ್ಪ (48) ಗಾಯಗೊಂಡಿದ್ದಾರೆ.
ಮೈಲಾರದಿಂದ ಪ್ರಯಾಣಿಕರನ್ನು ಕುರಿಸಿಕೊಂಡು ಬೀದರ್ಗೆ ಆಟೋ ಬರುತ್ತಿತ್ತು. ಎದುರಿಗೆ ಬಂದ ಹೈದರಾಬಾದ್ದಿಂದ ಬೀದರ್ ಮೂಲಕ ಉದಗೀರಗೆ ತೆರಳುತ್ತಿದ್ದ ಮಹಾರಾಷ್ಟ್ರ ಸಾರಿಗೆಯ ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಆಟೋದಲ್ಲಿದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದೆ. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.