ವಿವಿಧೆಡೆ ಲಕ್ಷ ಬಿಲ್ವಾರ್ಚನೆ

Rajshekhar Swamy
Published on

ಬೀದರ್: ಶ್ರಾವಣ ಶಿವದರ್ಶನ ಸಂಚಾರ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ನಿಮಿತ್ತ ವಿವಿಧೆಡೆ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಲಿದೆ.
ಅಭಿಯಾನದ ರೂವಾರಿ ಶ್ರೀ ರಾಜಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಭಾನುವಾರ ಬೆಳಗ್ಗೆ ಬಸವಕಲ್ಯಾಣ ತಾಲೂಕಿನ ಪರತಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಜರುಗಿತು.
ಸೋಮವಾರ ಮಹಾರಾಷ್ಟ್ರದ ಉಸ್ತುರಿ ಗ್ರಾಮದ ಶ್ರೀ ನಾಗನಾಥ ಮಹಾದೇವ ಮಂದಿರ, ಆ.13ರಂದು ನಿಲಂಗಾ, 14ಕ್ಕೆ ನದಿಹತ್ತರಗಾ, 15ಕ್ಕೆ ಚಿಟಗುಪ್ಪ ತಾಲೂಕಿನ ನಿಣರ್ಾ, 16ಕ್ಕೆ ಘಾಟಬೋರಾಳ, 18ಕ್ಕೆ ಸಿಂಧಗೇರಿ, 19ರಂದು ಕರಕನಳ್ಳಿ ಬಕ್ಕಪ್ರಭು ದೇವಸ್ಥಾನ, 21ಕ್ಕೆ ಬೇಲೂರು, 22ಕ್ಕೆ ಚಿಟಗುಪ್ಪ ಗವಿ ಮಂದಿರ, 25ಕ್ಕೆ ಉದಗೀರ ಮಹಾದೇವ ಮಂದಿರ, 28ಕ್ಕೆ ಆನಂದವಾಡಿ, ಸೆ.2ರಂದು ಜನವಾಡ ಮಹಾದೇವ ಮಂದಿರ, 4ರಂದು ಔರಾದ್ ಅಮರೇಶ್ವರ ಮಂದಿರ, ಸೆ.5ಕ್ಕೆ ಧನ್ನೂರು (ಎಚ್)ನಲ್ಲಿ ಬಿಲ್ವಾರ್ಚನೆ ಜರುಗಲಿದೆ. ಯಶಸ್ಸಿಗಾಗಿ ಎಲ್ಲ ಭಕ್ತರು ಸಹಯೋಗ, ಸಹಕಾರ ನೀಡಬೇಕೆಂದು ಪೂಜ್ಯರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net