

ಬೀದರ್: ಶ್ರಾವಣ ಅಂಗವಾಗಿ ಹಮ್ಮಿಕೊಂಡಿರುವ ಅಭಿಯಾನದ ಪ್ರಯುಕ್ತ ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು 108 ಗಣ್ಯರಿಗೆ ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಿಸಿದ್ದಾರೆ.
ಸಿದ್ಧಾಂಥ ಶಿಖಾಮಣಿ 21 ಭಾಷೆಗಳಿಗೆ ಅನುವಾದಗೊಂಡಿದೆ. ದೇಶ, ವಿದೇಶದಲ್ಲಿ ಗ್ರಂಥದ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 2 ರ ವರೆಗೆ ಕೇಂದ್ರ ಸಚಿವರು, ರಾಜ್ಯಗಳ ಸಚಿವರು, ಸಂಸದರು, ವಿದೇಶಿ ರಾಯಭಾರಿಗಳು, ಐಎಎಸ್ ಅಧಿಕಾರಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿದಂತೆ 1,008 ಜನರಿಗೆ ಗ್ರಂಥ ವಿತರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರಿಗೆ ವಿತರಣೆ: ನವದೆಹಲಿಯಲ್ಲಿ ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಶಿವಯ್ಯ ಸ್ವಾಮಿ ಗ್ರಂಥ ವಿತರಿಸಿದರು.
ಶ್ರಾವಣದಲ್ಲಿ ಪ್ರತಿಯೊಬ್ಬರೂ ಪವಿತ್ರ ಗ್ರಂಥ ಸಿದ್ಧಾಂಥ ಶಿಖಾಮಣಿಯ ಪಾರಾಯಣ ಮಾಡಬೇಕು ಎಂದು ಸಚಿವರು ಹೇಳಿದರು.
ಧರ್ಮ ಜಾಗೃತಿಗೆ ಅಭಿಯಾನ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.
ಪ್ರಮುಖರಾದ ಕಾಶೀನಾಥ ಹಿರೇಮಠ ಮತ್ತಿತರರು ಇದ್ದರು.