ನಮ್ಮ ಕರ್ನಾಟಕ ಸೇನೆಗೆ ನೇಮಕ

Ganesh patil
Published on

ಬೀದರ್: ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್ ಜ್ಯಾಂತಿ ತಿಳಿಸಿದ್ದಾರೆ.
ರಮೇಶ ಚಿದ್ರಿ (ಗೌರವಾಧ್ಯಕ್ಷ), ರಾಜಕುಮಾರ ಪಾಟೀಲ್, ಪ್ರದೀಪ್ ಪಾಟೀಲ್, ಅಜೀಮ್ ಪಟೇಲ್ (ಉಪಾಧ್ಯಕ್ಷರು), ಸಂಜು ಯಾದವ್ (ಪ್ರಧಾನ ಕಾರ್ಯದರ್ಶಿ), ಗಿರೀಶ್ ಬಿರಾದಾರ್, ರಾಮಶೆಟ್ಟಿ ಹುಣಜೆ, ಜಿತೇಂದ್ರ ರಾಠೋಡ್, ಸಂತೋಷ ಬಿರಾದಾರ್, ಅನೀಲ ರಾಜಗೀರಾ (ಸಂಘಟನಾ ಕಾರ್ಯದರ್ಶಿ), ದತ್ತು ಗಿರಿ (ಕಾರ್ಯದರ್ಶಿ), ಸುಧಾಕರ ರಾಠೋಡ್ (ಪ್ರಧಾನ ಸಂಚಾಲಕ), ಸಂತೋಷ ನಾಯಕ್ (ಸಂಚಾಲಕ), ದಿಲೀಪ್ ದೊಡ್ಡಮನಿ (ಸಲಹೆಗಾರ), ಲೋಕೇಶ್ ಪಾಟೀಲ್ (ಸಾಮಾಜಿಕ ಜಾಲತಾಣ ಮುಖ್ಯಸ್ಥ), ಸಂತೋಷ ಪಾಟೀಲ್ (ಬೀದರ್ ನಗರ ಘಟಕದ ಅಧ್ಯಕ್ಷ), ಹರ್ಷ ಬಿರಾದಾರ್ ಮತ್ತು ಶ್ರೀನಿವಾಸ ಘಂಟೆ (ಉಪಾಧ್ಯಕ್ಷರು) ಅವರನ್ನು ನೇಮಕ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಕನ್ನಡ ನೆಲ, ಜಲ, ಸಂಸ್ಕೃತಿ, ಭಾಷೆ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net